

ಕಲಬುರಗಿ: ಮನೆಯ ಕೀಲಿ ಮುರಿದು ಅಲಮಾರಾದಲ್ಲಿದ್ದ 1.32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ಕೋಟನೂರ (ಡಿ)ದ ಮಯೂರ ನಗರದಲ್ಲಿ ನಡೆದಿದೆ. ಜೇವರ್ಗಿಯಲ್ಲಿ ಸ್ಟಾಪ್ ನರ್ಸ್ ಆದ ಜ್ಯೋತಿ ರೆಡ್ಡಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಂಗಳೂರಿಗೆ ಹೋಗಿದ್ದ ವೇಳೆ ಅಲಮಾರದಲ್ಲಿದ್ದ ಬಂಗಾರ ಉಂಗುರ, ಲಾಕೆಟ್, ಬೆಳ್ಳಿಯ ಆರತಿ ಸೆಟ್, ಬೆಳ್ಳಿ ಕಾಲು ಚೈನ್ ನಗದು ಹಣ ಕಳ್ಳತನವಾಗಿದೆ ಎಂದು ವಿಶ್ವವಿದ್ಯಾಲಯ ಠಾಣೆಗೆ ದೂರು ನೀಡಿದ್ದಾರೆ.