

ಮನೆ ಕಳ್ಳತನ ಆರೋಪಿಗಳ ಬಂಧನ
ಬೆಳಗಾವಿ: ನಗರದ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀಗ ಹಾಕಿದ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಗ್ರಾಮೀಣ ಠಾಣೆ ಪೊಲೀಸರು ಬುಧವಾರ ಯಶಸ್ವಿಯಾಗಿದ್ದಾರೆ.
ಧಾಮಣೆ ನಿವಾಸಿ ಕಾರ್ತಿಕ @ ಪ್ರಶಾಂತ ವಸಂತ ಬಾಳೆಕುಂದ್ರಿ(20),ಪ್ರಸಾದ ಅಶೋಕ ಲಾಡ( 21), ವಿನಿತ ಸಹದೇವ ಬಾಳೆಕುಂದ್ರಿ( 22), ಸಲ್ಮಾನ್ ಕುತಬುದ್ದಿನ್ ಕಿಲ್ಲೆದಾರ( 24),ಸೌರಭ ಬಸವಂತ ರೇಮಾನಾಚೆ( 20) ಬಂಧಿತರು.
ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.ಬಂಧಿತರಿಂದ 130 ಗ್ರಾಂ ಚಿನ್ನ,310 ಗ್ರಾಂ ಬೆಳ್ಳಿಯ ವಸ್ತುಗಳು ,ಬೈಕ್ ಸೇರಿ 14.95 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.