ಮನೆ ಅಂಗಳದಲ್ಲಿ ಮಗುಚಿ ಬಿದ್ದ ಕಾರು

19 gkp 03.
Published on

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ಕೊಡಗಿಗೆ ಪ್ರವಾಸಕ್ಕೆ ಬಂದ ಪ್ರವಾಸಿಗರ ಕಾರು ಶನಿವಾರ ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ಉರುಳಿ ಬಿದ್ದಿದೆ.

ಬೆಂಗಳೂರಿನಿಂದ ಹುದಿಕೇರಿ ಮಾರ್ಗವಾಗಿ ಸಂಚರಿಸಿ ಇರ್ಪು ಫಾಲ್ಸ್ ಸೌಂದರ್ಯವನ್ನು ಸವಿದು ಕೇರಳದ ವೈನಾಡಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹುದಿಕೇರಿಯ ಗ್ರಾಮದ ಸೆವೆನ್ ಮೈಲ್‌ನಲ್ಲಿ ಮಲ್ಲಂಡ ಯತೀಶ್ ಅವರ ಮನೆಯ ಅಂಗಳಕ್ಕೆ ಕಾರು ಮಗುಚಿ ಬಿದ್ದಿದೆ.

ಕಾರಿನಲ್ಲಿ ಮೂರು ಯುವಕರು ಮತ್ತು ಮಹಿಳೆ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಸಣ್ಣಪುಟ್ಟ ಗಾಯಗಳಿಂದ ಪ್ರವಾಸಿಗರು ಪಾರಾಗಿದ್ದಾರೆ. ಕಾರು ಅಪ್ಪಳಿಸಿದ ರಭಸಕ್ಕೆ ಮಲ್ಲಂಡ ಯತೀಶ್ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆ.

ಸ್ಥಳೀಯ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net