ಮನುಷ್ಯನಿಗೆ ಪರಿಸರವೇ ಪ್ರಾಣ

govt college 2
Published on

ಕಲಬುರಗಿ: ಪರಿಸರ ಸಂರಕ್ಷಣೆಯಾದರೆ ಸಮಸ್ತ ಜೀವ ಸಂಕುಲನ ಉಳಿಯುತ್ತದೆ, ಪರಿಸರ ಸ್ವಚ್ಛ ಮತ್ತು ಹಸಿರಾಗಿದ್ದಾರೆ ಇಡೀ ಸಮಾಜಿಕ, ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಸಾಧ್ಯ, ಮನುಷ್ಯನಿಗೆ ಪರಿಸರವೇ ಪ್ರಾಣವಾಯುವಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಚೌವ್ಹಾಣ ಹೇಳಿದರು.
ಅವರು ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಹತ್ತಿರವಿರುವ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಸ್ಟೇಷನ ಬಜಾರ ಕಾಲೇಜಿನ ಆವರಣದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತಾಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಸ್ತಿತ್ವಕ್ಕಾಗಿ ಅರಣ್ಯ ಎಂಬ ಧ್ಯೆಯದೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ ಸುಮಾರು ಮುವತ್ತೆಂಟು ಸಾವಿರ ಸಸಿಗಳನ್ನು ಹಚ್ಚುವುದರ ಜತೆ ಕಲಬುರಗಿಯನ್ನು ಬಿಸಿಲು ನಗರಿಯ ಪಟ್ಟಿ ಕಳಚಿ, ಹಸಿರು ನಗರ ಮಾಡಲು ಅರಣ್ಯ ಇಲಾಖೆ ಸಾಕಷ್ಟು ಶ್ರಮವಹಿಸಿ ಮೇ ತಿಂಗಳಿನಿಂದ ಇಲ್ಲಿಯವರಿಗೆ ಸಾವಿರಾರು ಸಸಿಗಳನ್ನು ನೆಡಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ಭಾರತ ಸ್ವಾಭಿಮಾನ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಸೇವೆ ಸಮಾಜಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಿದೆ, ಹಸಿರು ಮನುಷ್ಯನ ಉಸಿರಾಗಿದ್ದು ,ಪ್ರತಿಯೊಬ್ಬರು ಇದನ್ನು ಅರಿತು ಗಿಡಗಳನ್ನು ಬೆಳೆಸಬೇಕು ಅಂದಾಗ ಸ್ವಾಭಿಮಾನ ಸಮುೃದ್ಧಿ ರಾಷ್ಟ್ರ ನಿಮರ್ಾಣವಾಗುತ್ತದೆ ಎಂದು ಹೇಳಿದರು.
ಎನ್ಎಸ್ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಬಸವರಾಜ ಗಾಣೂರೆ, ಎನ್ಎಸ್ಎಸ್ ಅಧಿಕಾರಿ ಪಾಂಡು ರಾಠೋಡ, ಉಪನ್ಯಾಸಕರಾದ ಶ್ರೀನಿವಾಸ, ಭಾರತಿ ಖೂಬಾ, ಸಿದ್ದಲಿಂಗ ಪೂಜಾರಿ, ಸ್ವಯಂ ಸೇವಕರು, ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net