ಮನುಷ್ಯನನ್ನು ಸುಡುವ ಚಿಂತೆ

04 kml 01
Published on

ಕಮಲನಗರ: ಚಿತೆ ಹೆಣ ಸುಟ್ಟರೆ, ಚಿಂತೆ ಜೀವಂತ ಮನುಷ್ಯನನ್ನು ಸುಡುತ್ತದೆ. ನಾವು ಇಲ್ಲದ ಚಿಂತೆ ತಲೆಯಲ್ಲಿ ತುಂಬಿಕೊAಡು ನಿರಾಶರಾಗುವುದು ಬಿಡಬೇಕು ಎಂದು ಜಾನಪದ ಪರಿಷತ್ ತಾಲೂಕು ಅಧ್ಯಕ್ಷ, ಪ್ರವಚನಕಾರು ಡಾ.ಸಂಜುಕುಮಾರ ಜುಮ್ಮಾ ಹೇಳಿದರು.
ಠಾಣಾಕುಶನೂರದ ಶಿವ ಮಂದಿರದಲ್ಲಿ ಅನುಭವ ಮಂಟಪ, ಹಿರೇಮಠ ಸಂಸ್ಥಾನದ ಭಾಲ್ಕಿ ಹಾಗೂ ವಿರಕ್ತ ಮಠ ಸಹಯೋಗದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡ ಶರಣರ ವಚನಗಳಲ್ಲಿ ಜೀವನ ದರ್ಶನ ವಿಷಯದಲ್ಲಿ ಪ್ರವಚನ ನೀಡಿದರು.
ಅಂಬಿಗರ ಚೌಡಯ್ಯ ಹೇಳುವಂತೆ ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ… ಹೀಗೆ ಚಿಂತೆಯ ಸುಳಿಯಲ್ಲಿ ಸಿಕ್ಕು ಸುಖ-ನೆಮ್ಮದಿ ಕಳೆದುಕೊಂಡಿz್ದೆÃವೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಆನಂದದ ಜೀವನ ನಮ್ಮದಾಗಬೇಕಾದರೆ, ಚಿಂತೆ ಚಿಂತನವಾಗಬೇಕು. ಅಂತರAಗದ ಅರಿವು ಸಂಪಾದಿಸಿಕೊಳ್ಳಬೇಕು. ಅದಕ್ಕೆ ಪರಿಹಾರ ಹುಡುಕಿಕೊಳ್ಳಬೇಕು. ಸಂಸ್ಕಾರದ ಬದುಕು ನಮ್ಮದಾಗಬೇಕು.ಮತ್ತೊಬ್ಬರ ಸಂತಸದಲ್ಲಿ ನಮ್ಮ ಸಂತಸವೂ ಕಾಣುವ ಭಾವ ಬರಬೇಕು ಎಂದರು.
ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮನ್ಮಥಪ್ಪ ಜೀರ್ಗೆ, ಶಂಕ್ರೆಪ್ಪ ಪರಶೆಟ್ಟೆ, ಗ್ರಾಪಂ ಅಧ್ಯಕ್ಷ ಕಾಶೀನಾಥ ಜಿರ್ಗೆ, ಜಗನ್ನಾಥ ಜಿರ್ಗೆ, ಸತೀಶ ಜಿರ್ಗೆ, ಬಾಬುರಾವ ವಾಘಮಾರೆ, ಓಂಕಾರ ಸ್ವಾಮಿ, ಜಗನ್ನಾಥ ಪಸಾರಗೆ, ಶಿವಕುಮಾರ ಜಿರ್ಗೆ, ಶಿವಶರಣಪ್ಪ ವಲ್ಲೆಪುರ, ಭಾರತಿ ಬೋಚರೆ, ಶಕುಂತಲಾ ಪನ್ನಾಳೆ, ಸರಸ್ವತಿ ಜಿರ್ಗೆ, ಸುನಿತಾ ಜಿರ್ಗೆ ಇತರರಿದ್ದರು. ಶಿಕ್ಷಕ ಶಿವಶರಣಪ್ಪ ವಲ್ಲೆಪುರೆ ಸ್ವಾಗತಿಸಿ, ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net