ಮನುಷ್ಯನ ಬದುಕಿಗೆ ಶರಣ ತತ್ವ ಅವಶ್ಯಕ

04-02kodekal01
Published on

ಕೊಡೇಕಲ್: ಬಸವಾದಿ ಶರಣರ ಚಿಂತನೆ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಬದುಕು ಸುಂದರವಾಗಲು ಸಾಧ್ಯ ಎಂದು ಪ್ರವಚನಕಾರ ಗಡಿಗೌಡಗಾಂವ್ ಹಾವಗಿಮಠದ ಶ್ರೀ ಡಾ.ಶಾಂತವೀರ ಶಿವಾಚಾರ್ಯರು ಹೇಳಿದರು.

ದುರದುಂಡೇಶ್ವರ ವಿರಕ್ತಮಠದ 21ನೇ ಕಾರ್ತಿಕೋತ್ಸವ ನಿಮಿತ್ತ ಹಮ್ಮಿಕೊಂಡ ಬಸವ ಚರಿತಾಮೃತ ಪ್ರವಚನದಲ್ಲಿ ಗುರುವಾರ ಬಸವೇಶ್ವರರ ತೊಟ್ಟಿಲೋತ್ಸವದಲ್ಲಿ ಮಾತನಾಡಿದ ಅವರು, ಸಾಮಾಜಿಕ, ಅಸಮಾನತೆ, ಶೋಷಣೆ, ಧಾರ್ಮಿಕ ಮೌಡ್ಯತೆ ಮತ್ತು ಸ್ತ್ರೀ ಸ್ವಾತಂತ್ರ್ಯದ ವಿರುದ್ಧ ಶರಣರು ಕಾಂತ್ರಿ ಮಾಡಿದರು.

ಸಮಾಜದಲ್ಲಿ ಕಾಯಕ, ದಾಸೋಹ, ನಂಬಿಕೆ, ಸಮಾನತೆ ಸಹೋದರತೆಯನ್ನು ದೇಶದ ಉದ್ದಗಲಕ್ಕೂ ಬಿತ್ತಿ ಮಾನವೀಯ ಮೌಲ್ಯಗಳ ತತ್ವವನ್ನು ಎಲ್ಲರ ಹೃದಯದಲ್ಲಿ ನೆಲೆಸುವಂತೆ ಮಾಡಿದ್ದಾರೆ ಎಂದರು.

ಪೀಠಾಧಿಪತಿ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ನಮ್ಮ ದೇಹಕ್ಕೆ ಹಸಿವಾದಾಗ ಹೇಗೆ ಆಹಾರದ ಅಗತ್ಯವಿದೆಯೋ ಅದೇ ರೀತಿ ಭಗವಂತನು ನೀಡಿದ ಈ ಶರೀರ ದಣಿವಾದಾಗ ಶರಣರ ಅಮೃತವಾಣಿಗಳ ಅವಶ್ಯಕತೆ ಇದೆ ಎಂದು ಹೇಳಿದರು.

ಡಾ.ಬಿ.ಬಿ.ಬಿರಾದಾರ, ಮಡಿವಾಳಯ್ಯ ಹಿರೇಮಠ, ಬಸಯ್ಯ ಹಿರೇಮಠ, ಅಯ್ಯಪ್ಪ ಪಡಶೆಟ್ಟಿ, ಸಂಗಪ್ಪ ಶಿವಪುರ, ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ, ಚಂದ್ರಶೇಖರ ಹಾವೇರಿ, ಬಸಪ್ಪ ಪಂಜಗಲ್, ಶಂಕರಗೌಡ ಜೇವರಗಿ, ಮಲ್ಲಣ್ಣ ಬಡಿಗೇರ, ನಂದನಗೌಡ, ಮಲ್ಲಿಕಾರ್ಜುನ ಆರಲಗಡ್ಡಿ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net