

ಮೈಸೂರು: ಬಸವಣ್ಣನವರ ವಚನಗಳನ್ನು ಅರ್ಥೈಸುವುದರ ಮೂಲಕ ಮನುಷ್ಯ ನಡೆದಂತೆ ನುಡಿಯಬೇಕು, ನುಡಿದಂತೆ ನಡೆಯಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಎಸ್.ಅಲ್ಲೂರು ಹೇಳಿದರು.
ಶ್ರೀಹೊಸಮಠ, ಶ್ರೀ ನಟರಾಜ ಸಂಸ್ಥೆಗಳ ಸಹಯೋಗದಲ್ಲಿ ನಟರಾಜ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಿವು, ಆಚಾರ, ಚಿಂತನೆ, ಕೌಶಲ ಸದಾ ಮಿಡಿಯುವಂತೆ ಇರಬೇಕು. ಜತೆಗೆ ಅತೀ ಮುಖ್ಯವಾಗಿ ಕಾಯಕವೇ ಕಡ್ಡಾಯ. ಕಾಯಕದಲ್ಲಿ ತಾರತಮ್ಯತೆ ಇರಬಾರದು. ಕಾಯಕ ಐಚ್ಛಿಕವಾಗಿರಬೇಕು. ಕಾಯಕ ದಾಸೋಹ ಸಹಿತ ಪರಿಕಲ್ಪನೆಯಾಗಿರಬೇಕು ಎಂದರು.
‘ಬಸವಣ್ಣನವರ ದೃಷ್ಟಿಯಲ್ಲಿ ಸಮ ಸಮಾಜ’ ಕುರಿತು ಮಾತನಾಡಿದ ಕಥೆಗಾರ ಅಬ್ದುಲ್ ರಶೀದ್, ಕಾಯಕವೇ ಕೈಲಾಸ. ನಿಮ್ಮ ಮನಸ್ಸು ನಿಮ್ಮ ಚಿಂತನೆ. ಎಲ್ಲವೂ ಶುದ್ಧವಾಗಿದ್ದಲ್ಲಿ ನೀವು ಮಾಡುವ ಕಾಯಕವೇ ಎಲ್ಲವೂ ಪರಿಪೂರ್ಣತೆ ಎಂಬ ಹೇಳಿದರು.
ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಲೋಲಾಕ್ಷಿ, ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹೇಶ್ ದಳಪತಿ ಇನ್ನಿತರರಿದ್ದರು.