

ತಿಕೋಟಾ: ಉಣ್ಣುವ ಹಕ್ಕು ಎಲ್ಲರಿಗೂ ಇದ್ದು, ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವ ಕರ್ತವ್ಯವನ್ನು ಎಲ್ಲರೂ ಪಾಲಿಸಬೇಕು. ಪ್ರಪಂಚ ಮತ್ತು ಪಾರಮಾರ್ಥ ಎರಡನ್ನೂ ತಿಳಿಸು ಬದುಕುವುದು ಅವಶ್ಯ ಎಂದು ಇಂಚಗೇರಿ ಮಠದ ಪೀಠಾಧಿಪತಿ ರೇವಣ್ಣಸಿದ್ಧೇಶ್ವರ ಮಹಾರಾಜರು ಹೇಳಿದರು.
ತಾಲೂಕಿನ ಕನಮಡಿ ಗ್ರಾಮದಲ್ಲಿ ಸ್ವಾತಂತ್ರೃ ಯೋಧ, ಆಧ್ಯಾತ್ಮಿಕ ಜೀವಿ ಕೆಂಚಪ್ಪ ಪೂಜಾರಿ ಅವರ 36ನೇ ಸಪ್ತಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಶನಿವಾರ ಅವರು ಮಾತನಾಡಿದರು.
ಇಂಚಗೇರಿ ಸಂಪ್ರದಾಯ ಸುಲಭವಾಗಿದ್ದು, ಆಡಂಬರವಿಲ್ಲದ ಪೂಜೆ ಮತ್ತು ಭಕ್ತಿಗೆ ಹೆಸರುವಾಸಿಯಾಗಿದೆ. ಸಮರ್ಥ ಗುರುಗಳ ಆಜ್ಞೆಯಂತೆ ನಡೆದು ಶಾಂತಿಯಿಂದ ಜೀವಿಸಬೇಕು. ಜಾತಿ, ಮತ, ಪಂಥಗಳ ಭೇದ ಇಲ್ಲದ ಸಂಪ್ರದಾಯವಾಗಿದೆ. 27 ಸಾವಿರ ಅಂತರ್ಜಾತಿ ವಿವಾಹ ಮಾಡಿದ ಕೀರ್ತಿ ಇಂಚಗೇರಿ ಸಂಪ್ರದಾಯಕ್ಕೆ ಸಲ್ಲುತ್ತದೆ ಎಂದರು.
ಹೊನವಾಡದ ಪ್ರವಚನಕಾರ ಬಾಬುರಾವ ಮಹರಾಜರು ಮಾತನಾಡಿ, ಟಿವಿ, ಮೊಬೈಲ್‌ನಲ್ಲಿ ಜೀವನ ಸವೆಸದೆ ಅಧ್ಯಾತ್ಮದಲ್ಲಿ ಪಾಲ್ಗೊಂಡರೆ ನೆಮ್ಮದಿ ಜೀವನ ಸಾಧ್ಯವಾಗುತ್ತದೆ ಎಂದರು.
ಶಂಕ್ರಪ್ಪ ಕರಜನಾಗಿ, ಮಹೇಶ ಅರಳಿ, ರದ್ದೇರಟ್ಟಿ ಮಹರಾಜರು, ತಾಜಪುರದ ಮಹಾರಾಜರು, ನ್ಯಾಯವಾದಿ ಕೆಂಚಪ್ಪ ಪೂಜಾರಿ ಇತರರಿದ್ದರು.