ಮನುಷ್ಯ ಜನ್ಮ ಸಾರ್ಥಕ ಮಾಡಿಕೊಳ್ಳಿ

IMG-20220919-WA0190
Published on

ಔರಾದ್: ದೇವರು ಕೊಟ್ಟ ಮನುಷ್ಯ ಜನ್ಮ ಅತ್ಯ ಅಮೂಲ್ಯವಾಗಿದೆ. ಅದನ್ನು ಒಳ್ಳೆಯ ನಡೆ, ನುಡಿಯ ಮೂಲಕ ಅದನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಪತಿ ಶ್ರೀ ಡಾ.ಬಸವಲಿಂಗ ಅವಧೂತರು ಹೇಳಿದರು.

ತಾಲೂಕಿನ ನಾಗನಪಲ್ಲಿ ಗ್ರಾಮದ ಹನುಮಾನ ಮಂದಿರದಲ್ಲಿ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಬದಲಾವಣೆ ಜಗದ ನಿಯಮವಾಗಿದೆ. ಯಾವುದೂ ಶಾಶ್ವತ ಅಲ್ಲ. ಹೀಗಾಗಿ ಸುಖ, ದುಃಖಗಳೆರಡರಲ್ಲೂ ಸಮಾಧಾನದಿಂದ ಮುನ್ನಡೆಯಬೇಕು ಎಂದು ತಿಳಿಸಿದರು. ತಂದೆ-ತಾಯಿ ಸೇವೆ ಎಲ್ಲರೂ ಮಾಡಬೇಕು. ಅವರಿಗೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಗುರು ಆದವರು ಭಕ್ತರ ಉದ್ಧಾರಕ್ಕೆ ಬದುಕು ಸವೆಸಬೇಕು. ಭಕ್ತರಿಗೆ ಸತ್ಯ, ಮುಕ್ತಿಯ ಮಾರ್ಗವನ್ನು ತೋರಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಅವಧೂತರನ್ನು ಮುಖ್ಯರಸ್ತೆಯಿಂದ ಕಾರ್ಯಕ್ರಮ ಸ್ಥಳವಾದ ಹನುಮಾನ ಮಂದಿರ ವರೆಗೆ ಕುದುರೆ ಮೇಲೆ ಕೂಡಿಸಿ ಮೆರವಣಿಗೆ ಮೂಲಕ ಕರೆ ತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net