ಮನುಗನಹಳ್ಳಿಯಲ್ಲಿ ಆಂಜನೇಯಸ್ವಾಮಿ ಉತ್ಸವ

IMG-20221219-WA0065
ಮನುಗನಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿಯನ್ನು ಮೆರವಣಿಗೆ ಮಾಡಲಾಯಿತು.
Published on

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ಜೈ ಶ್ರೀರಾಮ ಸೇನೆ ವತಿಯಿಂದ 3ನೇ ವರ್ಷದ ಶ್ರೀ ಆಂಜನೇಯಸ್ವಾಮಿ ಉತ್ಸವ ಸಂಭ್ರಮದಿಂದ ನಡೆಯಿತು.

ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಉತ್ಸವ ಮೂರ್ತಿಗೆ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಟ್ರಾೃಕ್ಟರ್‌ನಲ್ಲಿ ಅಲಂಕೃತ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮನೆಗಳ ಮುಂದೆ ರಂಗೋಲಿ ಬಿಡಿಸಿದ್ದ ಮಹಿಳೆಯರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಬೀದಿಗಳಲ್ಲಿ ಯುವಕರು ಭಗವತ್ ಧ್ವಜ ಹಾರಿಸಿದರು. ತಮಟೆ ಹಾಗೂ ವಾದ್ಯ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ದೇವಾಲಯದ ಬಳಿ ಬೃಹದಾಕಾರದ ಆಂಜನೇಯಸ್ವಾಮಿಯ ಫ್ಲೆಕ್ಸ್ ಹಾಕಲಾಗಿತ್ತು. ಭಕ್ತರಿಗೆೆ ಅನ್ನ ಸಂತರ್ಪಣೆ ಮಾಡಲಾಯಿತು.

ಗ್ರಾಮದ ಯಜಮಾನ ಎಂ.ಎಂ.ವೆಂಕಟೇಶ್, ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತು, ಯುವಕರಾದ ದಶರಥ, ನಾಗರಾಜು, ಮಲ್ಲೇಶ್, ಚೇತನ್, ಹನುಮಂತ, ಯತೀಶ್, ಮಹೇಶ್, ಸಂತೋಷ್, ಅರುಣ್, ಸ್ವಾಮಿ, ಶಾಮ್, ಶಮಂತ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net