

ಬೆಳಗಾವಿ: ಕೋಪ ನಿರ್ವಹಣೆ ಹಾಗೂ ಜೀವನದಲ್ಲಿ ಉತ್ತಮ ಹವ್ಯಾಸವನ್ನು ರೂಢಿಸಿಕೊಳ್ಳುವಂತೆ ಮನಃಪರಿವರ್ತನೆ ಮಾಡುವ ಅವಶ್ಯವಿದೆ ಎಂದು ಕೆಎಲ್‌ಇ ಶುಶ್ರೂಷ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಸುಧಾರೆಡ್ಡಿ ಹೇಳಿದರು.
ಕೆಎಲ್‌ಇ ವಿಶ್ವವಿದ್ಯಾಲಯದ ಬೆಳಗಾವಿ ಕೆಎಲ್‌ಇ ಶುಶ್ರೂಷ ವಿಜ್ಞಾನ ಮಹಾವಿದ್ಯಾಲಯದ ಮಾನಸಿಕ ಆರೋಗ್ಯ ಶುಶ್ರೂಷ ವಿಭಾ ಗವು ಬುಧವಾರ ನಗರದ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಆಯೋಜಿಸಿದ್ದ ಕೋಪ ನಿರ್ವಹಣೆ ಮತ್ತು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಕಾರಾಗೃಹದ ಮುಖ್ಯಅಧೀಕ್ಷಕ ಕೃಷ್ಣಕುಮಾರ ಮಾತನಾಡಿ, ಕೈದಿಗಳಿಗೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಧ್ಯಾನ ಮತ್ತು ಧಾರ್ಮಿಕತೆ ಅನಿವಾರ್ಯವಾಗಿದೆ. ಗೌತಮಬುದ್ದ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವಣ್ಣನವರ ತತ್ತ್ವಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಮಾನಸಿಕ ಆರೋಗ್ಯ ಶುಶ್ರೂಷ ವಿಭಾಗದ ಮುಖ್ಯಸ್ಥ ವೀರೇಶಕುಮಾರ ಎಸ್.ಎನ್. ಅವರು ಕೇಂದ್ರ ಕಾರಾಗೃಹದ ಸಿಬ್ಬಂದಿಗೆ ಸಸಿ ನೀಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಸಂಗನಗೌಡ ಎಸ್., ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಸುಂದರ, ಶೀತಲ ಎಸ್. ಅವರು ಕೋಪ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಕೆಎಲ್‌ಇ ಶುಶ್ರೂಶ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕೀರುನಾಟಕದ ಜಾಗೃತಿ ಮೂಡಿಸಿದರು. ಜಾಗೃತಿ ಕಾರ್ಯಕ್ರಮಕ್ಕೆ ಕೈದಿಗಳು ಮತ್ತು ಕೇಂದ್ರ ಕಾರಾಗೃಹದ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಕಾರಾಗೃಹದ ಸಂಯೋಜಕ ಶಶಿಕಾಂತ ಯಾದಗುಡೆ ಸಂಯೋಜಿಸಿದರು. ಸಹಾಯಕ ಅಧಿಕ್ಷಕರಾದ ಶಹಬುದ್ದೀನ್ ಕೆ., ಅರುಣ, ಯಲ್ಲಪ್ಪ ನಾಯ್ಕ, ಸಹ ಪ್ರಾದ್ಯಾಪಕ ಗುರುರಾಜ ಉಡಪಿ, ಸಹಾಯಕ ಪ್ರಾಧ್ಯಾಪಕ ಅಮಯ ಖಂಡೆ, ಸುಷ್ಮಾ ಪಾಟೀಲ್ ಉಪಸ್ಥಿತರಿದ್ದರು. ಡಾ. ಮಂಜುನಾಥ ಸೊಗಲದ ನಿರೂಪಿಸಿದರು.