

ಚಿತ್ತಾಪುರ: ಅಧಿಕ ಪವಿತ್ರ ಮಾಸವಾಗಿದ್ದು, ನಮ್ಮ ಮನಸ್ಸಿನಲ್ಲಿನ ಮಲೀನತೆಯನ್ನು ಸ್ವಚ್ಛಗೊಳಿಸುತ್ತದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.
ಅಕ್ಕಮಹಾದೇವಿ ಮಂದಿರದಲ್ಲಿ ಪುರೋಹಿತರು ಹಾಗೂ ಅಕ್ಕನ ಬಳಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಹೋಮ ಮತ್ತು ಭಜನೆ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಒಂದೊAದು ಮಾಸಕ್ಕೆ ಒಂದೊAದು ವ್ಯಶಿಷ್ಟö್ಯತೆ ಇರುತ್ತವೆ. ಅಧಿಕ ಮಾಸದಲ್ಲಿ ಹೋಮ- ಹವನ, ಪೂಜೆ-ಪಾಠ, ಜಪ-ತಪ ಮಾಡುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಅಲ್ಲದೆ ದೈವಾನುಗ್ರಹವಾಗಿ ಪುಣ್ಯ ಲಭಿಸುತ್ತದೆ ಎಂದರು.
ಪುರೋಹಿತರ ಬಳಗದ ಮಂಜುನಾಥ ಶಾಸ್ತಿçÃ, ಕರಬಸಯ್ಯ ಶಾಸ್ತಿçà ಮಂತ್ರ ಪಠಣ ಮಾಡಿದರು. ಪ್ರಮುಖರಾದ ವೆಂಕಟಮ್ಮ ಪಾಲಪ್, ಶಿವಲೀಲಾ ಮಠಪತಿ, ಸಂಗೀತಾ ಕೊಲ್ಲೂರ, ಭುವನೇಶ್ವರಿ ಸಿಂಪಿ, ಲಕ್ಷ್ಮೀ ಮಟ್ಟಿ, ಸೂರ್ಯಕಾಂತ ಸ್ವಾಮಿ, ವೀರೇಶ ಸ್ವಾಮಿ, ಮಡಿವಾಳಯ್ಯ ಸ್ವಾಮಿ, ಅಣವೀರಯ್ಯ ಸ್ವಾಮಿ, ಶ್ರೀನಿವಾಸ ಆಚಾರ್ಯ, ಶಾಂತಲಿAಗಯ್ಯ ಸ್ವಾಮಿ, ಶಂಭುಲಿAಗಯ್ಯ ಸ್ವಾಮಿ, ರೇವಣಸಿದ್ದಯ್ಯ ಸ್ವಾಮಿ, ಶ್ರೀಶೈಲ ಸ್ವಾಮಿ, ರಾಜು ಕಲಶೆಟ್ಟಿ, ಲಕ್ಷ್ಮೀಕಾಂತ ರಾಜೋಳ್ಳಿ, ಕ್ಷೇಮಲಿಂಗಯ್ಯ ಸ್ವಾಮಿ ಇತರರಿದ್ದರು.