

ಚಿತ್ರದುರ್ಗ: ಮನಸ್ಸಿನ ದುಃಖ ದೂರ ಮಾಡುವವನೇ ಗುರುವೆಂದು ನಗರದ ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿ ದರು. ಶ್ರೀ ಕಬೀರಾನಂದಾಶ್ರಮದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಗುರು ಪೂರ್ಣಿಮಾ ಕಾರ‌್ಯಕ್ರಮ ಸಾನಿಧ್ಯವಹಿಸಿ ಮಾತನಾಡಿದ ಶ್ರೀ ಗಳು,ಮನುಷ್ಯನ ದುಃಖ ದೂರ ಮಾಡುವುದು ಗುರುವಿನ ಕೆಲಸ. ಇದನ್ನು ಅರಿಯುವುದು ಭಕ್ತನ ಕರ್ತವ್ಯವೆಂದರು.
ಕಾರ‌್ಯಕ್ರಮ ಉದ್ಘಾಟಿಸಿದ ನಿವೃತ್ತ ಕನ್ನಡ ಪ್ರಾಧ್ಯಾಪಕ ಸಾಲಿಮಠ್ ಮಾತನಾಡಿ,ಗುರು ಶಿಷ್ಯನಲ್ಲಿರುವ ಕೀಳರಿಮೆ ಹೋಗಲಾಡಿಸಿ ಜ್ಞಾನ ದ ಬೆಳಕನ್ನು ಮೂಡಿಸುತ್ತಾನೆ ಎಂದರು.
ಯೋಗ ಗುರು ಗೋವಿಂದಸ್ವಾಮಿ,ಕಬೀರಾನಂದಾಶ್ರಮ ಭದ್ರಾವತಿ ಶಾಖಾ ಮಠದ ಕಾರ‌್ಯದ ರ್ಶಿ ರಾಮಮೂರ್ತಿ,ಶಿಕ್ಷಕ ನಿರಂಜನ ದೇವರಮನೆ ಮಾತನಾಡಿದರು. ಶಿಕ್ಷಕಿ ಸುಮನಾ ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ಸ್ವಾಗತಿಸಿದರು. ವೀ ರಣ್ಣ ಕಾರ‌್ಯಕ್ರಮ ನಿರೂಪಿಸಿದರು. ಆಯಿತೊಳು ವಿರೂಪಾಕ್ಷಪ್ಪ ಸಂಗಡಿಗರಿಂದ ಗೀತಾ ಗಾಯನ ಹಾಗೂ ಸುಬ್ರಾಯಭಟ್ ಅವರು ವೇ ದ ಘೋಷ ನಡೆಸಿಕೊಟ್ಟರು.