ಮನಸೂರೆಗೊಂಡ ಸಾಂಸ್ಕ್ರತಿಕ ಸೊಗಡು

Published on

ಬಳ್ಳಾರಿ : ಜಾನಪದ ಗೀತೆ-ನೃತ್ಯ, ಸಂಗೀತ, ನಾಟ್ಯ ಪ್ರಕರಗಳಾದ ಕೂಚುಪಡಿ, ಭರತನಾಟ್ಯಕ್ಕೆ ಮನ ಸೋಲದವರಿಲ್ಲ. ಸಾಂಸ್ಕ್ರತಿಕ ಸೊಗಡಿನಿಂದ ಕೂಡಿದ್ದ ತಿಂಗಳ ಸೊಬಗು ಸಾಂಸ್ಕ್ರತಿಕ ಕಾರ್ಯಕ್ರಮ ಕಲಾಸಕ್ತರ ಮನಸೂರೆಗೊಳಿಸಿ, ಭರಪೂರ ಮನರಂಜನೆಗೆ ಸಾಕ್ಷಿಯಾಯಿತು.
ನಗರದ ಡಾ. ರಾಜ್‌ಕುಮಾರ್ ರಸ್ತೆಯ ಸಾಂಸ್ಕ್ರತಿಕ ಸಮುಚ್ಚಯ ಆವರಣದಲ್ಲಿನ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿತ್ತು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಸಾಂಸ್ಕ್ರತಿಕ ನಿರ್ವಹಣಾ ಸಮಿತಿ ವತಿಯಿಂದ ಸ್ಥಳೀಯ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ತಿಂಗಳ ಸೊಬಗು” ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಇಲ್ಲಿನ ಸರ್ಕಾರಿ ಬಾಲಕಿಯರ ಬಾಲಮಂದಿರದ ಜಾನಪದ ನೃತ್ಯವು ಜಾನಪದ ಪ್ರೇಮಿಗಳ ಮನದಲ್ಲಿ ಮನಸೂರೆಗೊಂಡಿತು.
ಇಬ್ರಾಹಿಂಪುರದ ಎಸ್.ಹೆಚ್ ಹುಲುಗಪ್ಪ ಮತ್ತು ಸಂಗಡಿಗರಿಂದ ಪ್ರಸ್ತುತ ಪಡಿಸಿದ ಜಾನಪದ ಗೀತೆಗಳು ಜನಪದ ಸೊಗಡನ್ನು ಮರುಕಳಿಸುವಂತೆ ಮಾಡಿ, ಚಪ್ಪಾಳೆ ಗಿಟ್ಟಿಸಿಕೊಂಡರು.
ಬಳ್ಳಾರಿಯ ಲಕ್ಷ್ಮಿ ಕಲಾ ಟ್ರಸ್ಟ ನೃತ್ಯಗಾರರ ಕೂಚುಪಡಿ ಮತ್ತು ಭರತನಾಟ್ಯ ನೃತ್ಯಗಳು ನೆರೆದಿದ್ದವರ ಕಣ್ಮನ ಸೆಳೆದು, ಸಾಂಸ್ಕೃತಿಕ ಮೆರಗು ನೀಡಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net