ಮನುಷ್ಯನ ಬದುಕು ಶ್ರೇಷ್ಠ್ಠವಾಗಿರಲಿ

ಆಲೂರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಬಿ ವಿಜಯಕಾಂತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ರೇಣುಕಾ ಪ್ರಸಾದ್, ಧರ್ಮರಾಜೇಂದ್ರ ಸ್ವಾಮೀಜಿ,ಡಿ.ಎಸ್.ಜಯಣ್ಣ,  ಶಿವಮೂರ್ತಿ, ಡಾ.ಜಯರಾಜ್,  ಕೆ.ಎಸ್.ಮಂಜೇಗೌಡ ಇದ್ದರು.
ಆಲೂರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಬಿ ವಿಜಯಕಾಂತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ರೇಣುಕಾ ಪ್ರಸಾದ್, ಧರ್ಮರಾಜೇಂದ್ರ ಸ್ವಾಮೀಜಿ,ಡಿ.ಎಸ್.ಜಯಣ್ಣ, ಶಿವಮೂರ್ತಿ, ಡಾ.ಜಯರಾಜ್, ಕೆ.ಎಸ್.ಮಂಜೇಗೌಡ ಇದ್ದರು.
Published on

ಆಲೂರು: ಮನುಷ್ಯನ ಹುಟ್ಟು ಮತ್ತು ಸಾವು ಪ್ರಕೃತಿಯ ಸಹಜ ಗುಣ. ಆದರೆ ಈ ನಡುವಿನ ಬದುಕು ಶ್ರೇಷ್ಠ್ಠವಾಗಿರಬೇಕು. ಈ ದಿಸೆಯಲ್ಲಿ ಬದುಕಿದವರು ಎಂ.ಬಿ.ವಿಜಯಕಾಂತ್ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಣಾಧಿಕಾರಿ ಹಾಗೂ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಸಂಸ್ಥಾಪನ ಕಾರ್ಯದರ್ಶಿಯಾಗಿದ್ದ ಎಂ.ಬಿ.ವಿಜಯಕಾಂತ್ ಅವರ ಶಿವಗಣಾರಾಧನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ ಲೌಕಿಕತೆಯೊಂದಿಗೆ ಅಲೌಕಿಕತೆಯೂ ಮುಖ್ಯ. 12ನೇ ಶತಮಾನದ ಶರಣರ ದೃಷ್ಟಿಕೋನ ಅರ್ಥೈಸಿಕೊಂಡರೆ ಜೀವನ ಸರಳತೆಯೊಂದಿಗೆ ಸಾರ್ಥಕತೆ ದಾರಿಯಲ್ಲಿ ಸಾಗುತ್ತದೆ. ಈ ನಿಟ್ಟಿನಲ್ಲಿ ವಿಜಯಕಾಂತ್ ಅವರ ಸೇವಾ ಕಾರ್ಯ ಶ್ಲಾಘನೀಯ ಎಂದು ಸ್ಮರಿಸಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ವಿಜಯ್ಕಾಂತ್ ಅವರ ಹೆಸರಿನಲ್ಲಿ ಕುಟುಂಬದವರು ವೀರಶೈವ-ಲಿಂಗಾಯತ ಸಮಾಜಕ್ಕೆ 5 ಲಕ್ಷ ರೂ.ದೇಣಿಗೆಯಾಗಿ ನೀಡಿದ್ದು, ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಸಂಕ್ಲಾಪುರ ಮಠದ ಪೀಠಾಧ್ಯಕ್ಷ ಧರ್ಮರಾಜೇಂದ್ರ ಸ್ವಾಮೀಜಿ, ತಾಲೂಕು ವೀರಶೈವ ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ, ಸಹ ಕಾರ್ಯದರ್ಶಿ ಡಾ.ಜಯರಾಜ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಸೇರಿದಂತೆ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net