ಮನರಂಜಿಸಿದ ಜಗಜಟ್ಟಿಗಳ ಕಾದಾಟ

4Hierbagewadi1
ಬಡೇಕೊಳ್ಳ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ಭಾರಿ ಜಂಗೀ ನಿಖಾಲಿ ಕುಸ್ತಿಗೆ ಶ್ರೀಗಳು ಚಾಲನೆ ನೀಡಿದರು. ನಾಗೇಂದ್ರ ಸ್ವಾಮೀಜಿ, ಅಡವೀಶ್ವರ ದೇವರು, ನಿರಂಜನ ದೇವರು, ಸಚ್ಚಿದಾನಂದ ದೇವರು ಇದ್ದರು.
Published on

ಹಿರೇಬಾಗೇವಾಡಿ: ಸಮೀಪದ ಬಡೇಕೊಳ್ಳ ಮಠದ ಮೈದಾನದಲ್ಲಿ ಗುರುವಾರ ಹಿರೇಬಾಗೇವಾಡಿಯ ಭಕ್ತರ ನೇತೃತ್ವದಲ್ಲಿ 21 ಜೋಡಿಯ ಭಾರಿ ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು.

ವೇ.ಮೂ. ಕಲ್ಲಯ್ಯ ಸ್ವಾಮಿ ಉದೇಶಿಮಠ ಕುಸ್ತಿ ಕಣಕ್ಕೆ ಪೂಜೆ ಸಲ್ಲಿಸಿದರು. ನಂತರ ಶಿವಯೋಗಿ ಸದ್ಗುರು ನಾಗೇಂದ್ರ ಸ್ವಾಮೀಜಿ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಬೆಳಗಾವಿ, ಹಳಿಯಾಳ, ಖಾನಾಪುರ, ಧಾರವಾಡ, ಬೈಲಹೊಂಗಲ, ಹಾರೊಗೇರಿ, ಇಂಗಳಗಿ, ಚಿಕ್ಕಬಾಗೇವಾಡಿ, ಘಟಪ್ರಭಾ, ನೇಗಿನಹಾಳ, ಗಂದಿಗವಾಡ ಸೇರಿ ವಿವಿಧ ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದರು.

ತಾರಿಹಾಳದ ಅಡವೀಶ್ವರ ದೇವರು, ಲಿಂಗನಾಯಕನಹಳ್ಳಿಯ ನಿರಂಜನ ದೇವರು, ಧಾರವಾಡದ ಸಚ್ಚಿದಾನಂದ ದೇವರು ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net