

ಮೈಸೂರು: ಗೋಲ್ಡನ್ ಕ್ರೀಪರ್ ಸಂಸ್ಥೆಯ ವತಿಯಿಂದ ನಗರದ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಮೂರು ದಿನ ಆಯೋಜಿಸಿರುವ ‘ದ ಜ್ಯುವೆಲ್ಲರಿ ಷೋ’ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು
ದೇಶದ 20 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸಿರುವ ಈ ಉತ್ಸವವನ್ನು ನಟಿ ನಿಶ್ಚಿಕಾ ನಾಯ್ದು ಉದ್ಘಾಟಿಸಿ ಶುಭ ಕೋರಿದರು. ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಗೋಲ್ಡನ್ ಕ್ರೀಪರ್ ಸಂಸ್ಥೆಯ ಬಿ.ಎನ್.ಜಗದೀಶ್, ಹೇಮಲತಾ ಜಗದೀಶ್ ಇನ್ನಿತರರು ಪಾಲ್ಗೊಂಡಿದ್ದರು.
ಮೇಳದಲ್ಲಿ ಪ್ರಶಸ್ತಿ ವಿಜೇತ ಮತ್ತು ಹೆಸರಾಂತ ಆಭರಣ ಸಂಸ್ಥೆಗಳಾದ ಬೆಂಗಳೂರಿನ ಗಜರಾಜ್, ಕೀಯಾ, ಎಂ.ಪಿ.ಜ್ಯುವೆಲರ್ಸ್, ಪಂಚಕೇಸರಿ ಬಡೇರ, ಪಿಎಂಜೆ, ಸಿಂಹ ಜ್ಯುವೆಲರ್ಸ್, ಶ್ರೀಕುಮಾರನ್ ತಂಗಮಳಿಗೈ, ಶ್ರೀವಾರಿ, ಶ್ರೀಗಣೇಶ್ ಜೇಮ್ಸ್, ವಂಡರ್ ಡೈಮಂಡ್ಸ್, ರೂಪಂ ಸಿಲ್ವರ್, ಸ್ಯಾಂಚೀಸ್, ಮದನ್ ಜೆಮ್ಸ್, ಮೈಸೂರಿನ ರಾಜ್ ಡೈಮಂಡ್ಸ್, ದೆಹಲಿಯ ಜೌರಾ, ಹೈದರಾಬಾದ್‌ನ ಪನ್ನ ಜ್ಯುವೆಲರ್ಸ್, ಜೈಪುರದ ಸುನಿಲ್ ಜ್ಯುವೆಲರ್ಸ್ ಮಳಿಗೆಗಳನ್ನು ತೆರೆದಿವೆ.
ದೇಶದ ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣಗಳು ಇಲ್ಲಿ ಲಭ್ಯವಿವೆ. ಮದುವೆ, ಹಬ್ಬದ ಶುಭ ಸಂದರ್ಭಕ್ಕೆ ಆಭರಣಗಳನ್ನು ಖರೀದಿ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಬಗೆ ಬಗೆಯ ಆಭರಣಗಳು ಮನ ಸೆಳೆಯುತ್ತಿವೆ.
ವಿಶೇಷ ವಿನ್ಯಾಸಗಳನ್ನು ಒಳಗೊಂಡ ಆಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಎಲ್ಲ ಚಿನ್ನದ ಆಭರಣಗಳು ಬಿಐಎಸ್ ಹಾಲ್‌ಮಾರ್ಕ್ ಹೊಂದಿವೆ. ವಜ್ರಾಭರಣಗಳು ಅಂತಾರಾಷ್ಟ್ರೀಯ ಗುಣಮಟ್ಟದ ಜಿಐಎ/ಐಜಿಐ ಪ್ರಮಾಣೀಕೃತ ಮುದ್ರೆಯನ್ನು ಹೊಂದಿವೆ.
ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಚಿನ್ನಾಭರಣ ಮತ್ತು ವಜ್ರಾಭರಣ ಕುರಿತು ಉಚಿತ ಮಾಹಿತಿ ನೀಡಲಾಗುತ್ತದೆ.
ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆಯನ್ನು ಒದಗಿಸಲಾಗುತ್ತದೆ. ಮೈಸೂರಿನ ಸುತ್ತಲಿನ ಜನರ ಅಭಿರುಚಿಯನ್ನು ಅರಿತು ಅವರ ಇಚ್ಛೆಗೆ ಅನುಗುಣವಾಗಿ ಆಭರಣಗಳನ್ನು ತಯಾರಿಸಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.