ಮನ-ಮನೆಯಲ್ಲಿ ದೇಶಪ್ರೇಮ ಮೂಡಲಿ

14,KHH-1P
Published on

ಕಾನಹೊಸಹಳ್ಳಿ: ದೇಶಪ್ರೇಮ ಮನ, ಮನೆಗಳಲ್ಲಿ ಉಕ್ಕಿ ಹರಿಯಬೇಕು. ಸ್ವಾತಂತ್ರ್ಯೋತ್ಸವ ದಿನದಂದು ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಬೇಕೆಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಹುರುಳಿಹಾಳು ಹೊಂಬಾಳೆ ರೇವಣ್ಣ ಹೇಳಿದರು.

ಗ್ರಾಮದ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಬಿಜೆಪಿ ಮಂಡಲ, ಮಹಿಳಾ ಮೋರ್ಚಾ, ರೈತಮೋರ್ಚಾದಿಂದ ಆಯೋಜಿಸಿದ್ದ ಹರ್‌ಘರ್ ತಿರಂಗಾ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಮಹನೀಯರು ತ್ಯಾಗ, ಬಲಿದಾನದೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ನಮ್ಮ ದೇಶ ನಮ್ಮ ಹೆಮ್ಮೆ ಎಂಬ ಅಭಿಮಾನ ಎಂದೆಂದೂ ಇರಬೇಕೆಂದು ತಿಳಿಸಿದರು.

ಮಂಡಲ ಅಧ್ಯಕ್ಷ ಬಣವಿಕಲ್ಲು ಕೆ.ನಾಗರಾಜ ಮಾತನಾಡಿ, ದೇಶವನ್ನು ರಕ್ಷಣೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ದೇಶದ ಸ್ವಾತಂತ್ರ್ಯೋತ್ಸವದ ಸಂಭ್ರಮ, ರಾಷ್ಟ್ರಪ್ರೇಮ, ದೇಶಾಭಿಮಾನ ಮೂಡಿಸುವುದು ಹಾಗೂ ಈಗಿನ ಪೀಳಿಗೆಗೂ ರಾಷ್ಟ್ರಧ್ವಜದ ಮಹತ್ವ ಸಾರುವ ನಿಟ್ಟಿನಲ್ಲಿ ಬಿಜೆಪಿ ತಿರಂಗಾ ಯಾತ್ರೆ ನಡೆಸುತ್ತಿದೆ ಎಂದು ತಿಳಿಸಿದರು.

ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಕುಂಬಾರ ಶಾರದಮ್ಮ ಬಸವರಾಜ, ಜಿಲ್ಲಾ ಕಾರ್ಯದರ್ಶಿ ಹುರುಳಿಹಾಳು ರೇಖಾ ಮಲ್ಲಿಕಾರ್ಜುನ, ಮಹಿಳಾಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಕೆರೆ ಗೀತಾ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ ನಾಯಕ, ರೈತಮೋರ್ಚಾ ತಾಲೂಕು ಅಧ್ಯಕ್ಷ ಎಂ.ಬಿ.ಅಯ್ಯನಹಳ್ಳಿ ಯಜಮಾನಪ್ಪ, ಪ್ರಧಾನ ಕಾರ್ಯದರ್ಶಿ ಶಾಂತನಹಳ್ಳಿ ವೀರಭದ್ರಪ್ಪ, ಮುಖಂಡರಾದ ಹನುಮಜ್ಜರ ನಾಗೇಶ್, ಹುಲಿಕೆರೆ ಈ.ವೆಂಕಟಸ್ವಾಮಿ, ನೇತ್ರಾವತಿ ಮಂಜುನಾಥ, ಶಿಲ್ಪಾ ಬಸಪ್ಪ, ಲಕ್ಷ್ಮೀದೇವಿ, ವಾಗೀಶ್ ಮೂರ್ತಿ, ಅಮಲಾಪುರ ಅಂಜಿನಪ್ಪ, ರಾಕೇಶ್, ಅವಿನಾಶ್, ಶಿವಾನಂದಸ್ವಾಮಿ, ಹುಡೇಂ ಸಿದ್ದಮ್ಮರ ಸುರೇಶ್, ಈಚಲಬೊಮ್ಮನಹಳ್ಳಿ ಕುಂಬಾರ ಶಿವಕುಮಾರ್, ಗಜಸಿದ್ದೇಶ್, ಹುರುಳಿಹಾಳು ತಿಪ್ಪಮ್ಮ, ಹೊಸೂರು ಅಭಿಷೇಕ್, ಹಾರಕಬಾವಿ ಅರುಣ್, ಕೆ.ಎನ್.ಬಿ.ಆನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net