ಮಧ್ವರ ಚರಿತ್ರೆ ತಿಳಿಸುವ ಸುಮಧ್ವ ವಿಜಯ

oplus_2097152
oplus_2097152
Published on

ಕೆಂಭಾವಿ: ದ್ವೆÊತ ಸಿದ್ಧಾಂತ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರ ಸಂಪೂರ್ಣ ಜೀವನ ಚರಿತ್ರೆ ತಿಳಿಸಿಕೊಡುವ ಮಹಾನ್ ಗ್ರಂಥವೇ ಶ್ರೀ ಸುಮಧ್ವ ವಿಜಯ ಎಂದು ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕ ಪಂ.ವೆAಕಣ್ಣಾಚಾರ್ಯ ಪೂಜಾರ ಹೇಳಿದರು.

ಪಟ್ಟಣದ ಉತ್ತರಾದಿ ಮಠದಲ್ಲಿ ಶನಿವಾರ ಏರ್ಪಡಿಸಿದ್ದ ಸುಮಧ್ವ ವಿಜಯ ಪಾರಾಯಣ, ಮಧು ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ ಅವರು, ಸಾಕ್ಷಾತ್ ಹನುಮಂತ ದೇವರ ಮೂರನೇ ಅವತಾರ ಎನ್ನುವ ಮಧ್ವಾಚಾರ್ಯರ ಮಹಿಮೆಯನ್ನು ನಾರಾಯಣ ಪಂಡಿತಾಚಾರ್ಯರು ೧೬ ಸರ್ಗದ ಮೂಲಕ ತಿಳಿಸಿಕೊಟ್ಟಿದ್ದಾರೆ. ಒಟ್ಟು ೧೦೦೮ ಶ್ಲೋಕದ ಈ ಗ್ರಂಥ ವಿಶ್ವಪ್ರಸಿದ್ಧಿ ಪಡೆದಿದ್ದು, ಇದನ್ನು ಓದುವುದು ಅಥವಾ ಕೇಳುವುದರಿಂದ ನಮ್ಮೆಲ್ಲ ಕಷ್ಟಗಳು ದೂರವಾಗಿ ಸುಖಿಯಾಗಿರಲು ಸಾಧ್ಯ ಎಂದರು.

ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಆಶೀರ್ವಾದ ಬಲದಿಂದ ಗ್ರಂಥದ ಆನ್‌ಲೈನ್ ಪಾಠ ಪ್ರಾರಂಭಿಸಿದ್ದು, ದೇಶದ ವಿವಿಧೆಡೆಯ ನೂರಾರು ಆಸ್ತಿಕರು ಭಾಗವಹಿಸುತ್ತಿದ್ದಾರೆ. ಮುಂದಿನ ವರ್ಷದ ಜನವರಿಯಲ್ಲಿ ಮಳಖೇಡದ ಜಯತೀರ್ಥರ ಸನ್ನಿಧಾನದಲ್ಲಿ ಈ ಪಾಠದ ಸಮರ್ಪಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಂತರ ಶ್ರೀ ಸತ್ಯನಾರಾಯಣ, ಶ್ರೀ ಸುಮಧ್ವ ಮಾರುತಿ ಹಾಗೂ ಯತಿಷತುಷ್ಟಯರ ವೃಂದಾವನಕ್ಕೆ ೧೦೮ ಕೆಜಿ ಜೇನುತುಪ್ಪದ ಅಭಿಷೇಕ, ಸುಂದರಕಾAಡ ಪಾರಾಯಣ, ರಥೋತ್ಸವ, ಅಲಂಕಾರ, ತೀರ್ಥಪ್ರಸಾದ ನಡೆಯಿತು. ರಾಘವೇಂದ್ರ ನಾಡಿಗೇರ ಅನ್ನಸಂತರ್ಪಣ ಸೇವೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net