ಮಧ್ಯವರ್ತಿಗಳಿಗೆ ಹಣ ನೀಡದಿರಿ

2,KHH-2P
Published on

ಕಾನಹೊಸಹಳ್ಳಿ: ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ. ಇದರಿಂದಾಗಿ ಮಧ್ಯವರ್ತಿಗಳಿಗೆ ಹಣ ನೀಡಬಾರದು. ಯೋಜನೆಯಡಿ ನೀಡಲಾದ ಪರಿಕರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ನರಸಿಂಹನಗಿರಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 2021-22 ಹಾಗೂ 2022-23 ಸಾಲಿನ ಗಂಗಾಕಲ್ಯಾಣ ಯೋಜನೆಯ 51 ಫಲಾನುಭವಿಗಳಿಗೆ ಕೊಳವೆಬಾವಿ ಪರಿಕರಗಳನ್ನು ವಿತರಿಸಿ ಸೋಮವಾರ ಮಾತನಾಡಿದರು. ಕೂಡ್ಲಿಗಿ ತಾಲೂಕಿನಲ್ಲಿ 16 ಸಾವಿರ ಹೆಕ್ಟೇರ್ ಮಳೆ ಆಧಾರಿತ ಕೃಷಿ ಜಮೀನಿದ್ದು, 3600 ಹೆಕ್ಟೇರ್ ಜಮೀನು ಕೊಳವೆಬಾವಿ ಮೂಲಕ ನೀರಾವರಿ ಆಗಿದೆ ಎಂದರು.

ಈ ಭಾಗದಲ್ಲಿರುವ ಸಣ್ಣ ಹಿಡುವಳಿದಾರ ರೈತರನ್ನು ಹಂತ ಹಂತವಾಗಿ ಫಲಾನುಭವಿಗಳಾಗಿಸುವ ಮೂಲಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಯತ್ನ ಮಾಡಲಾಗುವುದು. ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಫಲಾನುಭವಿಗಳು ಯಾರಿಗೂ ಒಂದು ರೂಪಾಯಿ ನೀಡುವ ಅಗತ್ಯವಿಲ್ಲ. ಫಲಾನುಭವಿಗಳು ಕೊಳವೆಬಾವಿ ಪರಿಕರಗಳನ್ನು ಬಳಸಿಕೊಳ್ಳದೆ ಮರಾಟ ಮಾಡಿಕೊಳ್ಳುತ್ತಾರೆ ಎಂಬ ಮಾಹಿತಿಯೂ ಇದೆ. ಅಂತಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯಾವುದೇ ಸರ್ಕಾರಿ ಸೌಲಭ್ಯ ಸಿಗದಂತೆ ಮಾಡುವುದಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net