ಮಧ್ಯವರ್ಜನ ಶಿಬಿರ ಕತ್ತಲೆಯನ್ನು ತೊಡೆದು ಹಾಕುವ ದಾರಿದೀಪ ; ವಿಜಯ ಕುಮಾರ ಶ್ರೀ ಬಣ್ಣನೆ

ಮಧ್ಯವರ್ಜನ ಶಿಬಿರ ಕತ್ತಲೆಯನ್ನು ತೊಡೆದು ಹಾಕುವ ದಾರಿದೀಪ ; ವಿಜಯ ಕುಮಾರ ಶ್ರೀ ಬಣ್ಣನೆ
Published on


ಹಾಸನ : ಮದ್ಯವರ್ಜನ ಶಿಬಿರ ಮಧ್ಯ ವ್ಯಸನಿಗಳಿಗೆ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದಾರಿ ದೀಪ ವಾಗಿದೆ ಎಂದು ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ ಬಣ್ಣಿಸಿದರು


ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ  ವತಿಯಿಂದ ನಗರದ ತಣ್ಣೀರು ಹಳ್ಳ ಮಠದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು


ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಟ್ಟುಹಾಕಿ ಇಂತಹ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ, ಬಸವಣ್ಣ ನವರ ಹಾದಿಯಲ್ಲಿ ಜಾತಿ, ಧರ್ಮ ಲಿಂಗ ತಾರತಮ್ಯ ಗಳನ್ನು ಹೊರತುಪಡಿಸಿ ಎಲ್ಲರನ್ನು ಸದೃಢ ರನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.


ಯೋಜನೆಯ ನಿರ್ದೇಶಕಿ ಮಮತಾ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧೀಜಿ ಅವರ ಸ್ಮರಣೆ ಮಾಡುವ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳನ್ನು ಮದ್ಯವರ್ಜನ ಶಿಬಿರ ಆಯೋಜನೆ ಮಾಡಿ ವಿಶೇಷವಾಗಿ ಆಚರಿಸಲಾಗುತ್ತಿದೆ, ಪಾನಮುಕ್ತ ಸಮಾಜ ನಿರ್ಮಾಣಕ್ಕೆ ಗಾಂಧೀಜಿ ಅವರ ಕೊಡುಗೆ ಅಪಾರ ಅವರ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.


ಶೈಕ್ಷಣಿಕವಾಗಿ ಹಾಗೂ ಸಾಮಾಜಿಕ, ಧಾರ್ಮಿಕವಾಗಿ ಪುರುಷರಷ್ಟೇ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಬೇಕು ಎಂಬ ಗಾಂಧೀಜಿ ಅವರ ಆಲೋಚನೆಗೆ ಅನುಗುಣವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಯಶಸ್ವಿ ಗೊಳಿಸುವ ಕೆಲಸ ಮಾಡುತ್ತಿದೆ ಎಂದರು.
ಮಧ್ಯ ವ್ಯಸನದಿಂದ ಮುಕ್ತಿ ಹೊಂದಿದ ಶಿವಕುಮಾರ್ ಮಾತನಾಡಿ, ಕುಡಿತದ ಚಟ ಒಂದು ಅಂಟು ರೋಗವಿದ್ದಂತೆ, ಅನಿವಾರ್ಯ ಕಾರಣಗಳಿಂದ ಈ ಚಟಕ್ಕೆ ಅಂಟಿಕೊಂಡಿರುವ ನಮಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಲಾವಣೆಯ ಅಲೆ ಎಬ್ಬಿಸಿದೆ,  ಕುಡಿತದ ಚಟ ಬಿಡಿಸಲು ಸರಕಾರವೇ ಕ್ರಮ ಕೈಗೊಳ್ಳದ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನ ಮುಕ್ತ ಮಾಡಲು ಮುಂದಾಗಿರುವುದು ಶ್ಲಾಘನೀಯಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ದುಶ್ಚಟಗಳಿಂದಕುಟುಂಬದಲ್ಲೇ ಗೌರವ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ, ಈ ನಿಟ್ಟಿನಲ್ಲಿ ಎಲ್ಲರೂ ಪಾನ ಮುಕ್ತರಾಗಿ ಸಮಾಜದಲ್ಲಿ ಗೌರವಯುತವಾಗಿ ಬದುಕೋಣ ಎಂದರು.


ಶಿಬಿರದಲ್ಲಿ ಸುಮಾರು 53 ಜನ ಫಲಾನುಭವಿಗಳು ಭಾಗವಹಿಸಿ ಪಾನ ಮುಕ್ತರಾಗಿ ಶಿಬಿರದ ಸದುಪಯೋಗ ಪಡೆದುಕೊಂಡರು.


ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಎಚ್. ಎಲ್ ಮಲ್ಲೇಶ್ ಗೌಡ, ಮಲ್ಲಿಕಾರ್ಜುನ್, ಜಿಲ್ಲಾ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಉಪಾಧ್ಯಕ್ಷ ಮಹೇಶ್, ಸೋಮಣ್ಣ, ಕೋಶಾಧಿಕಾರಿ ಜಗದೀಶ್, ತುಳುಸಿ ರಾಮ್, ಕಾಂಚನ ಮಾಲ, ವಿಜಯ್ ಕುಮಾರ್,  ತಾಲೂಕು  ಯೋಜನಾಧಿಕಾರಿ ಪುರುಷೋತ್ತಮ್, ಮೇಲ್ವಿಚಾರಕ ಮಾಧವ್, ಕೃಷಿ ಅಧಿಕಾರಿ ದೇವರಾಜ್, ವಲಯ ಮೇಲ್ವಿಚಾರಕ ರ ಬಳಗದವರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net