

ಹಾಸನ : ಮಧ್ಯಪಾನ ಹಾಗೂ ಕುಡಿತದ ಅಮಲು ಮನುಷ್ಯನನ್ನು ಅಜ್ಞಾನದಲ್ಲಿ ಮುಳುಗಿಸುತ್ತದೆ ಎಂದು ತಣ್ಣಿರುಹಳ್ಳ ಮಠದ ಶ್ರೀ ವಿಜಯ ಕುಮಾರ ಸ್ವಾಮೀಜಿ ನುಡಿದರು.
ನಗರದ ತಣ್ಣಿರುಹಳ್ಳ ಮಠದ ಸಭಾಂಗಣ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಡಿತದ ಅಮಲಿನ ಬ್ರಮೆಯು ಆರ್ಥಿಕ ಸಾಮಾಜಿಕ, ದೈವಿಕ, ಸಾಂಸಾರಿಕ ಸ್ಥಾನವನ್ನು ನಾಶ ಮಾಡಿ ಮನುಷ್ಯನನ್ನು ಅಂಧಕಾರದಲ್ಲಿ ಮೂಳುಗಿಸುತ್ತದೆ ಎಂದರು.
ಮನುಷ್ಯನ ಜೀವನವನ್ನು ಸಂಪೂರ್ಣವಾಗಿ ಆವರಿಸಿ ಜೀವನದ ಸರ್ವಸ್ವವನ್ನೂ ಕಬಳಿಸುವ ಶಕ್ತಿ ವ್ಯಸನಕ್ಕಿದೆ, ಹೊಸ ಜೀವನ ಸಂತೋಷಕ್ಕಾಗಿ ಪ್ರತಿ ನಿತ್ಯ ದೇವರ ಪೂಜೆ, ನಾಮ ಸ್ಮರಣೆ ಅಸಹಾಯಕತೆ ಯಿಂದ ಹೊರ ಬರಲು ಸಹಕಾರಿಯಾಗಿದೆ ಎಲ್ಲರೂ ದೈವ ಭಕ್ತಿಯಲ್ಲಿ ಪಾಲ್ಗೊಂಡು ಸುಂದರ ಬದುಕು ಕಟ್ಟಿಕೊಳ್ಳು ವಂತೆ ಕರೆ ನೀಡಿದ ಅವರು, ತನ್ನ ಶಕ್ತಿಯನ್ನು ತಾನೇ ಅರ್ಥ ಮಾಡಿಕೊಂಡು ಬದುಕುವ ಆತ್ಮ ಸ್ಥೈರ್ಯವನ್ನು ಪಡೆಯಲು ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದರು.
ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಮಲ್ಲಿಕಾರ್ಜುನ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜನೆ ಮಾಡಿರುವ ಶಿಭಿರ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಇದರಿಂದ ಅನೇಕರ ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳಲಿದೆ ಎಂದರು.
ಮುಂದಿನ 8 ದಿನಗಳು ಮದ್ಯ ವ್ಯಸನಿಗಳಿಗೆ ಮನ ಪರಿವರ್ತನೆ ಆಗಲು ಸಿಕ್ಕಿರುವ ಸದಾವಕಾಶ ಅದನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿ ದೀಪ ಆಗುವಂತೆ ಕರೆ ನೀಡಿದರು.
ಮದ್ಯ ವ್ಯಸನಕ್ಕೆ ಒಳಗಾದವರಿಂದ ಇಂದು ಕುಟುಂಬಗಳು ಬೀದಿ ಪಾಲಾಗುತ್ತಿವೆ, ಅನೇಕ ಸಂಕಷ್ಟಗಳನ್ನು ಎದುರಿಸುತ್ತಿವೆ, ಮಧ್ಯ ಪಾನ ಆರೋಗ್ಯಕ್ಕೆ ಅನಿಕಾರಕ ಎಂದು ಗೊತ್ತಿದ್ದರೂ ಅದಕ್ಕೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವ ಅನೇಕರಿಗೆ ಸಂವಾದದ ರೂಪದಲ್ಲಿ ಅವರನ್ನು ಮನ ಪರಿವರ್ತನೆ ಮಾಡಿ ಅವರಿಗೆ ಉತ್ತಮ ಜೀವನ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿ ಮಧ್ಯ ವ್ಯಸನದಿಂದ ಆಗುವ ಅಪಾಯಗಳ ಬಗ್ಗೆ ಮಾಹಿತಿ ಪಡೆದರು.
ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್, ನಗರ ಸಭಾ ಸದಸ್ಯ ಹೆಚ್. ವಿ. ಚಂದ್ರೇ ಗೌಡ, ಎಲೆಕ್ಟ್ರಾನಿಕ್ ರಿಪೇರಿದರಾರ್ ಸಂಘದ ಅಧ್ಯಕ್ಷ ರಂಗಸ್ವಾಮಿ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಂ. ಸಿ. ರಾಜು, ಪ್ರೇಮ್ ಕುಮಾರ್ ಜೈನ್, ವಿಜಯ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರ್ದೇಶಕಿ ಮಮತಾ ಹರೀಶ್, ಯೋಜನಾಧಿಕಾರಿ ಪುರುಷೋತ್ತಮ್, ಮೇಲ್ವಿಚಾರಕ ದೇವರಾಜ್,ಹೊನ್ನೇಗೌಡ್, ಜೀವನ್ ದೇವೇಗೌಡ ಇತರರು ಇದ್ದರು.