

ಕಲಬುರಗಿ: ಮುಂಬೈ ಮಧ್ಯ ರೈಲ್ವೆ ವಲಯ ಜೋನಲ್ ಸಲಹಾ ಸಮಿತಿ ಸದಸ್ಯರನ್ನಾಗಿ ಅರವಿಂದ ನವಲಿ ಅವರನ್ನು ನೇಮಿಸಲಾಗಿದೆ. ದಕ್ಷಿಣ ಮಧ್ಯ ರೈಲ್ವೆಯ ಸಿಕಂದರಾಬಾದ್ ವಿಭಾಗದ ರೈಲ್ವೆ ಸಲಹಾ ಸಮಿತಿ, ಮಧ್ಯ ರೈಲ್ವೆ ಸೊ¯್ಲÁಪುರ ವಿಭಾಗದ ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ನವಲಿ ಅವರ ಸೇವೆ ಹಾಗೂ ಸಂಸದ ಡಾ.ಉಮೇಶ ಜಾಧವ್ ಶಿಫಾರಸು ಪರಿಗಣಿಸಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.