ಮಧುಸೂದನ್ ಆರಾಧನಾ ಸಮಿತಿ ಅಧ್ಯಕ್ಷ

29 smg madhusudan
Published on

ಶಿವಮೊಗ್ಗ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಆರ್.ಮಧುಸೂದನ್ ಅವರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು ಆ.31ರ ಬೆಳಗ್ಗೆ 11.30ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ. ಬೂತ್, ವಾರ್ಡ್, ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮೂರು ಅವಧಿಗೆ ಶಿವಮೊಗ್ಗ ನಗರ ಹಾಗೂ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖರಾಗಿ, ಸಾಂಸ್ಕೃತಿಕ ಪ್ರಕೋಷ್ಠ, ಧ್ಯೇಯ ಕಮಲದ ಜಿಲ್ಲಾ ಸಂಚಾಲಕರಾಗಿ, ಎರಡು ಅವಧಿಗೆ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿಯಾಗಿರುವ ಅವರು, ನಿನಾದ ಸಾಂಸ್ಕೃತಿಕ ಸಂಸ್ಥೆ ಮೂಲಕ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನಸೆಳೆದಿದ್ದಾರೆ. 1989ರಲ್ಲಿ ಆರ್​ಎಸ್​ಎಸ್​ನ ಹಿರಿಯರಾಗಿದ್ದ ದಿವಂಗತ ಹಿರಿಯೂರು ಕೃಷ್ಣಮೂರ್ತಿ ಅವರ ಮಾರ್ಗದರ್ಶನದಿಂದ ಆರ್​ಎಸ್​ಎಸ್​ನಲ್ಲಿ ಹೆಚ್ಚು ಸಕ್ರಿಯರಾದರು.

ಅಧಿಕಾರ ಸ್ವೀಕಾರ:

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಸ್.ಎಸ್.ಜ್ಯೋತಿಪ್ರಕಾಶ್ ಆ.31ರಂದು ಬೆಳಗ್ಗೆ 11 ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net