ಮಧುವನಹಳ್ಳಿ ನಂಜುಂಡಸ್ವಾಮಿ ಚಾಮುಲ್ ಅಧ್ಯಕ್ಷ

10rajesh3
Published on

ಚಾಮರಾಜನಗರ: ಚಾಮುಲ್ ಅಧ್ಯಕ್ಷ ಸ್ಥಾನಕ್ಕೆ ಮಧುವನಹಳ್ಳಿ ನಂಜುಂಡಸ್ವಾಮಿ ಅವರನ್ನು ಸೋಮವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಚಾಮುಲ್ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬೇರೆ ಯಾವ ನಿರ್ದೇಶಕರೂ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ನಂಜುಂಡಸ್ವಾಮಿ ಹೆಸರು ೋಷಣೆ ಮಾಡಲಾಯಿತು. ಚಾಮುಲ್ ಆಡಳಿತ ಮಂಡಳಿಯಲ್ಲಿ 14 ಜನರಿಗೆ ಮತದಾನದ ಹಕ್ಕು ಇದೆ. ಇದರಲ್ಲಿ ಒಬ್ಬರಾದ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಪ್ರತಿನಿಧಿ ಮತದಾನದಿಂದ ದೂರ ಉಳಿಯುವುದರಿಂದ 13 ಮತಗಳ ಚಲಾವಣೆಯಾಗುತ್ತದೆ. 9 ಜನ ನಿರ್ದೇಶಕರು, ಒಬ್ಬರು ನಾಮ ನಿರ್ದೇಶಕರು, ಹಾಲು ಮಹಾ ಮಂಡಳದ ಪ್ರಧಾನ ವ್ಯವಸ್ಥಾಪಕ, ಪಶು ಪಾಲನಾ ಇಲಾಖೆ ಉಪ ನಿರ್ದೇಶಕ, ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಸೋಮವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ಶೀಲಾ ಸಿ.ಪುಟ್ಟರಂಗಶೆಟ್ಟಿ, ನಂಜುಂಡಪ್ಪ, ಎಸ್.ಮಹದೇವಸ್ವಾಮಿ, ಸದಾಶಿವಮೂರ್ತಿ, ಶಾಹುಲ್ ಅಹಮದ್, ಕೆ.ಕೆ.ರೇವಣ್ಣ(ನಾಮ ನಿರ್ದೇಶಿತ ಸದಸ್ಯ), ಡಿಆರ್‌ಸಿಎಸ್ ಜ್ಯೋತಿ ಅರಸ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಹನುಮೇಗೌಡ, ಕೆಎಂಎ್ ಪ್ರತಿನಿಧಿ ಕೆ.ಎಸ್.ಬಸವರಾಜು ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವಶಂಕರ್, ಸಹಾಯಕ ಚುನಾವಣಾಧಿಕಾರಿಯಾಗಿ ನಾಗೇಶ್ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net