

ಚಿತ್ರದುರ್ಗ: ಆರೋಗ್ಯಕರ ಜೀವನ ಶೈಲಿಯ ಮೂಲಕ ಮಧುಮೇಹ ಮುಕ್ತ ಗ್ರಾಮ ನಿರ್ಮಾಣಕ್ಕೆ ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಬ್ಯಾಲಾಳು ಗ್ರಾಮಸ್ಥರಿಗೆ ಮನವಿ ಮಾಡಿದರು.
ಗ್ರಾಮೀಣಾಭಿವೃದ್ಧಿ ಪಂ.ರಾಜ್,ಆರೋಗ್ಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬ್ಯಾಲಾಳ್ ಗ್ರಾಪಂನಲ್ಲಿ ಗು ರುವಾರ ಆಯೋಜಿಸಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ‌್ಯಾಗಾರ ಮತ್ತು ವಿಶ್ವ ಮಧುಮೇಹ ದಿನಾಚರಣೆಯಲ್ಲಿ ಮಾತನಾಡಿ,ಉತ್ತಮ ಜೀವನಶೈಲಿಯಿಂದ ಮಧುಮೇಹ ನಿಯಂತ್ರಿಸಬಹುದೆಂದರು. ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ,ಸಕ್ಕರೆ ಕಾಯಿಲೆ,ಜನರ ಉತ್ತಮ ಆರೋಗ್ಯಕ್ಕೆ ಸವಾಲಾಗುತ್ತಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಅನುಸೂಯಮ್ಮಮಹದೇವಪ್ಪ,ಉಪಾಧ್ಯಕ್ಷೆ ದ್ಯಾಮಕ್ಕ ದೇವೇಂದ್ರಪ್ಪ,ಪಿಡಿಒ ಅಸ್ಮಾ,ಸದಸ್ಯರಾದ ಲಕ್ಷ್ಮೀದೇವಿ, ಬೈಯ ಪ್ಪ, ಸಮುದಾಯ ಆರೋಗ್ಯಾಧಿಕಾರಿ ದಿನೇಶ್,ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ವಿನುತಾ,ತಾಪಂ ಡಿಟಿಸಿ ಸರಸ್ವತಿ,ಆಶಾ ಬೋಧ ಕಿ ತಬಿತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಾಮಪ್ಪ, ಪ್ರವೀಣ್,ರೇಣುಕಸ್ವಾಮಿ ಮತ್ತಿತರರು ಇದ್ದರು. ರಕ್ತ ಹಾಗೂ ಮಧುಮೇಹ ಪರೀಕ್ಷೆ ಏರ್ಪಡಿಸಲಾಗಿತ್ತು.