

ಮದ್ಯಸೇವನೆ, ತಡೆಗೆ, ಶ್ರಮಿಸಲಿ,
ಕಟಕೋಳ: ಧರ್ಮಸ್ಥಳ ಗ್ರಾಮಾಭಿವದ್ಧಿ ಟ್ರಸ್ಟ್ ಮೂಲಕ ವೀರೇಂದ್ರ ಹೆಗ್ಗಡೆ ಅವರು ಸಮಾಜದ ಅಭಿವದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಕಟಕೋಳ ಮುದಕವಿ ಕುಮಾರೇಶ್ವರ ಮಠದ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಸ್ಥಳಿಯ ಬಿ.ಎನ್. ಅಡ್ಡಣಗಿಯವರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 1843ನೇ ಮದ್ಯವರ್ಜನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜನತೆಯಲ್ಲಿ ಅರಿವು ಮತ್ತು ಜಾಗತಿ ಮೂಡಿಸುವ ಮೂಲಕ ಮದ್ಯ ಸೇವನೆ ತಡೆಗಟ್ಟಲು ಶ್ರಮಿಸಬೇಕು ಎಂದರು.
ಯುವ ಧುರೀಣ ಅನಿಕೇತನ ಪಟ್ಟಣ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಶಿಬಿರ ಏರ್ಪಡಿಸುವುದರಿಂದ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದರು. ಟ್ರಸ್ಟ್ನ ನಿರ್ದೇಶಕ ಎಚ್.ಆರ್. ಲವಕುಮಾರ ಮಾತನಾಡಿ, ಮದ್ಯವರ್ಜನ ಶಿಬಿರ ಯಶಸ್ಸಿಗೆ ಸಮುದಾಯದ ಸಹಭಾಗಿತ್ವದ ಅವಶ್ಯ ಎಂದರು. 85 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ, ಪಿಕೆಪಿಎಸ್ ಅಧ್ಯ ಸಂಗಮೇಶ ಶೆಟ್ಟಿಸದಾವರ್ತಿ, ಶಿಬಿರದ ಅಧ್ಯ ರಮೇಶ ಕಾಡೇಶನವರ ಮಾತನಾಡಿದರು. ಸಂಗಮೇಶ ಅಡ್ಡಣಗಿ, ಎನ್.ಬಿ. ದಂಡಿನದುರ್ಗಿ, ಐ.ಬಿ. ಪಾಟೀಲ, ಬಸವರಾಜ ದೀವಟಗಿ, ಅಶೋಕ ಕುಲಗೋಡ, ಉಮೇಶ ದುಗ್ಗಾಣಿ, ಮಹಾಂತೇಶ ಕುಂಬಾರ ಇತರರು ಇದ್ದರು. ಮೇಲ್ವಿಚಾರಕ ಎಂ. ನಾಗೇಂದ್ರ ನಿರೂಪಿಸಿದರು. ೇತ್ರ ಯೋಜನಾಧಿಕಾರಿ ಸತೀಶ್ ಡಿ ವಂದಿಸಿದರು.