

ಮೇ 8ರಂದು ಸಂಜೆ 6ರಿಂದ ಮೇ 10ರ ಮಧ್ಯರಾತ್ರಿಯವರೆಗೆ (ಮತದಾನ ಮುಕ್ತಾಯದ ದಿನದವರೆವಿಗೆ) ಹಾಗೂ ಮತ ಎಣಿಕೆಯ ದಿನದಂದು ಒಣ ದಿವಸಗಳೆಂದು ಘೋಷಣೆ ಮಾಡಲಾಗಿದೆ.
ಸದರಿ ಒಣ ದಿವಸಗಳಂದು ಎಲ್ಲ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಗಿ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ ನಿಷೇಧಿಸಲಾಗುವುದು. ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆ ಮಾಡಲು ನಿಷೇಧವಿರುತ್ತದೆ. ಮೇ 10ರಂದು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಸಂತೆ ಜಾತ್ರೆ ಮತ್ತು ಉತ್ಸವಗಳನ್ನು ಮುಂದೂಡಿ ಆದೇಶವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೊರಡಿಸಿದ್ದಾರೆ
ಪ್ರಸಾರ ನಿರ್ಬಂಧ:
ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾದ ಸಂದರ್ಭದಲ್ಲಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಎಲ್ಲ ರೀತಿಯ ಬಹಿರಂಗ ಪ್ರಚಾರ ಟೆಲಿವಿಷನ್, ರೇಡಿಯೋ, ಕೇಬಲ್ ನೆಟ್‌ವರ್ಕ್ ಇಂತಹ ಇತರ ಮಾಧ್ಯಮದಲ್ಲಿ ಚುನಾವಣಾ ವಿಷಯ ಚರ್ಚೆ, ಪ್ರಚಾರ, ಸಂದರ್ಶನ, ಜಾಹೀರಾಜು ಹಾಗೂ ಚುನಾವಣೆ ಸಂಬಂಧಿತ ಅಭಿಪ್ರಾಯಗಳ ಪ್ರಸಾರವನ್ನು ನಿರ್ಬಂಧಿಸಲಾಗಿದೆ.
2667 ಮತ ಚಲಾವಣೆ:
ಜಿಲ್ಲೆಯಲ್ಲಿ 2,667 ಜನ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲ ವ್ಯಕ್ತಿಗಳಿಂದ ಮತದಾನ ಆಗಿದೆ.
12 ಡಿ ಅರ್ಜಿಯನ್ನು ಸಲ್ಲಿಸಿದ ಈ ಮತದಾರರಿಗೆ ಅವರ ಮನೆಗಳಿಗೆ ತೆರಳಿ ಅಂಚೆ ಮತಪತ್ರದ ಮೂಲಕ ಮತ ಚಲಾವಣೆಗೆ ಏ.29ರಿಂದ ಮೇ 4ರ ವರೆಗೆ ಅವಕಾಶ ನೀಡಲಾಗಿತ್ತು. ಈ ಸೌಲಭ್ಯದ ಮೂಲಕ ಜಿಲ್ಲೆಯಲ್ಲಿ 2667 ಮತದಾರರು ಮತ ಚಲಾಯಿಸಿದ್ದಾರೆ.