

ಹಾಸನ: ಗಂಡ-ಹೆಂಡತಿ ಇಬ್ಬರೂ ಮದ್ಯಪಾನ ಮಾಡಿ ಜಗಳವಾಡುವಾಗ ಹೆಂಡತಿಯನ್ನು ದೂಗಿದಾಗ ನೆಲದ ಮೇಲೆ ಬಿದ್ದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದು ಹಾಸನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅರಕಲಗೂಡು ಪಟ್ಟಣದ ಜೈ ಭೀಮ್ ನಗರದ ವಾಸಿಯಾದ ಆಶಾ (35) ಮೃತಪಟ್ಟ ಹೆಂಡತಿ.
15ವರ್ಷಗಳ ಹಿಂದೆ ಆಶಾ ಅವರು ರಮೇಶ್ (38) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗಂಡ-ಹೆಂಡತಿ ಇಬ್ಬರೂ ಮದ್ಯವ್ಯಸನಿಗಳಾಗಿದ್ದರು. ಜು.15ರಂದು ರಮೇಶ್ ಮತ್ತು ಆಶಾ ಕೆಲಸ ಮುಗಿಸಿಕೊಂಡು ಮನೆಗೆ ಕುಡಿದು ಬಂದು ಸಂಜೆ ಸುಮಾರು 7.30 ರ ಸಮಯದಲ್ಲಿ ಸಂಸಾರದ ವಿಚಾರವಾಗಿ ಜಗಳ ಆರಂಭಿಸಿದ್ದಾರೆ. ಜಗಳವಾಡುತ್ತಿದ್ದಾಗ ಆಶಾಳನ್ನು ದೂಗಿದಾಗ ನೆಲದ ಮೇಲೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿದೆ. ಈ ವೇಳೆ ಪತಿ ರಮೇಶ್ ಮಗಳು ಭೂಮಿಕಾಳೊಂದಿಗೆ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆನಂತರ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.17ರಂದು ಆಶಾ ಕೊನೆಯುಸಿರೆಳೆದಿದ್ದಾರೆ. ರಮೇಶ್ ವಿರುದ್ಧ ಅರಕಲಗೂಡು ಪೊಲೀಸ್ ಠಾಣೆಯ ಪಿಎಸ್‌ಐ ಕಾಳೇಗೌಡ ಅವರು ಸ್ವ-ಪಿರ‌್ಯಾದು ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ