ಮದ್ಯಪಾನ ಪ್ರಿಯರ ಮೇಲೆ ಅಧಿಕಾರಿಗಳ ದಬ್ಬಾಳಿಕ:ವೆಂಕಟೇಶಗೌಡ ಆರೋಪ

ಮದ್ಯಪಾನ ಪ್ರಿಯರ ಮೇಲೆ ಅಧಿಕಾರಿಗಳ ದಬ್ಬಾಳಿಕ:ವೆಂಕಟೇಶಗೌಡ ಆರೋಪ
Published on

ಹಾಸನ: ಸಿಎಲ್ 2 ಮದ್ಯದಂಗಡಿಗಳಲ್ಲಿ ಎಂಆರ್‌ಪಿ ದರಪಟ್ಟಿ ಪ್ರದರ್ಶಿಸಬೇಕೆಂದು ಅಬಕಾರಿ ಅಧಿಕಾರಿಗಳಿಗೆ ಒತ್ತಾಯಿಸಲು ಹೋದಾಗ ಅಧಿಕಾರಿಗಳು ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮದ್ಯಪಾನ ಪ್ರಿಯರ ಹೋರಾಟ ಸಂಘದ ಅಧ್ಯಕ್ಷ ವೆಂಕಟೇಶಗೌಡ ಆರೋಪಿಸಿದರು.
ಪೊಲೀಸರು ಸಹ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಬಡಾವಣೆ ಠಾಣೆ ಪೊಲೀಸರು ಅಬಕಾರಿ ಅಧಿಕಾರಿಗಳ ಪರ ಕೆಲಸ ಮಾಡುತ್ತಿದ್ದಾರೆ. ಮದ್ಯಪಾನ ಪ್ರಿಯರಿಗೆ ಮದ್ಯದ ದರ ಗೊತ್ತಾಗಬೇಕು ಎಂಬುದು ನಮ್ಮ ಉದ್ದೇಶ. ಇದನ್ನು ಕೇಳಲು ಹೋದ ನಮ ವಿರುದ್ಧ ಅಬಕಾರಿ ಆಯುಕ್ತರು ಉಢಾಪೆಯಿಂದ ವರ್ತಿಸುತ್ತಿದ್ದಾರೆ. ನಮ್ಮ ಮೇಲೆ ಪ್ರಕರಣ ದಾಖಲಿಸುವ ಪೊಲೀಸರು ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧವೂ ಎಫ್ ಐಆರ್ ದಾಖಲಿಸಬೇಕಿತ್ತಲ್ಲವೇ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಫೆ.28ರಂದು ನಾವು ಅಬಕಾರಿ ಇಲಾಖೆಗೆ ಹೋದಾಗ ಏನೇನಾಯ್ತು ಎಂಬುದನ್ನು ಸಿಸಿಟಿವಿ ಕ್ಯಾಮರಾದಲ್ಲಿ ಪರಿಶೀಲಿಸಬೇಕು. ನಾವು ಮದ್ಯಪ್ರಿಯರು ಮಾತಿನಲ್ಲಿ ವ್ಯತ್ಯಾಸ ಆಗಬಹುದು. ಆದರೆ ಅಧಿಕಾರಿಯೂ ಹಾಗೆಯೇ ವರ್ತಿಸಬೇಕಾ. ನಮ್ಮ ವಿರುದ್ಧ ನೀಡಿರುವ ದೂರಿನಲ್ಲಿ ಏಕವಚನ ಬಳಸಿದ್ದಾರೆ. ಮದ್ಯ ಸೇವಿಸುತ್ತೇವೆ ಎಂದ ಮಾತ್ರಕ್ಕೆ ಅವರು ಕೇಳಿದಷ್ಟು ದುಡ್ಡು ಕೊಡಬೇಕಾ? ಗ್ರಾಮಗಳಲ್ಲಿ ಕದ್ದುಮುಚ್ಚಿ ಎಣ್ಣೆ ಮಾರಾಟ ಮಾಡುತ್ತಿದ್ದಾರೆ. ಯಾರ ಮೇಲೂ ಕೇಸ್ ಹಾಕಿಲ್ಲ. ಕಾರಿನಲ್ಲಿ ತೆಗೆದುಕೊಂಡು ಹೋಗಿ ಹೋಗಿ ಎಣ್ಣೆ ಮಾರಾಟ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net