ಮದ್ಯದಂಗಡಿಗೆ ಕಾಗೋಡು ಪರವಾನಗಿ ಕೇಳಿದ್ದರು: ಹಾರತಾಳು ಹಾಲಪ್ಪ ವಾಗ್ದಾಳಿ

haratalu halappa WEEEE
Published on

ಸಾಗರ: ಊರಲ್ಲಿ ಹೆಂಡದ ಅಂಗಡಿಗಳನ್ನು ಮಾಡಿಸುತ್ತಿದ್ದೇನೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನನ್ನ ಮೇಲೆ ಟೀಕೆ ಮಾಡುತ್ತಿದ್ದಾರೆ. ಆದರೆ ನನ್ನ ಅವಧಿಯಲ್ಲೇ ಅವರು ಮದ್ಯದ ಅಂಗಡಿಗೆ ಪರವಾನಗಿ ಕೇಳಿದ್ದಾರೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವನ್ನು ಅನಗತ್ಯ ವಿಚಾರಗಳ ಜೊತೆಯಲ್ಲಿ ಹೋಲಿಸಿ ಮಾತನಾಡುವುದು ಕಾಗೋಡು ತಿಮ್ಮಪ್ಪ ಅವರಿಗೆ ಶೋಭೆ ತರುವುದಿಲ್ಲ. ಅವರು 70ರ ದಶಕದಿಂದಲೂ ಸಿಗರೇಟ್ ವ್ಯಾಪಾರ ನಡೆಸುತ್ತಿದ್ದಾರೆ. ಸಿಗರೇಟು ಹೆಂಡಕ್ಕಿಂತಲೂ ಅಪಾಯಕಾರಿ ಎಂದು ಕುಟುಕಿದ್ದಾರೆ. ಯಾವುದೋ ವಿಚಾರವನ್ನು ಇನ್ಯಾವುದಕ್ಕೋ ತಾಳೆ ಹಾಕುವುದು ಎಷ್ಟು ಸರಿ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಊರಿನ ಅಭಿವೃದ್ಧಿಯಲ್ಲಿ ನಾನು ನಿರಂತರವಾಗಿ ತೊಡಗಿಕೊಂಡಿದ್ದೇನೆ ಜನತೆಗೂ ಅದು ತಿಳಿದಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net