

ಚಾಮರಾಜನಗರ: ವರ್ಷಾಂತ್ಯದಲ್ಲಿ ಎಲ್ಲೆಡೆ ಮದ್ಯದ ವ್ಯಾಪಾರ ವಹಿವಾಟು ಜೋರಾಗಿರುತ್ತದೆ. ಆದರೆ, ಗಡಿಜಿಲ್ಲೆ ಚಾಮರಾಜನಗರದಲ್ಲಿ ಮದ್ಯದಂಗಡಿಗಳ ಎಣ್ಣೆ ಖರೀದಿ ಕಡಿಮೆ ಇದೆ.
ಜಿಲ್ಲಾ ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 2024ರ ಡಿಸೆಂಬರ್‌ನಲ್ಲಿ 86,015 ಮದ್ಯದ ಪೆಟ್ಟಿಗೆಗಳು, 31,807 ಲೀಟರ್ ಬಿಯರ್‌ಗಳನ್ನು ಮದ್ಯದಂಗಡಿಗಳು ಖರೀದಿ ಮಾಡಿವೆ. ಆದರೆ ಇದೇ ಅವಧಿಯಲ್ಲಿ ಅಂದರೆ, 2023ರ ಡಿ.31ರಲ್ಲಿ 88,075 ಮದ್ಯದ ಪೆಟ್ಟಿಗಳು, 37,829 ಲೀಟರ್ ಬಿಯರ್ ಖರೀದಿಯಾಗಿದ್ದವು. ಎರಡೂ ವರ್ಷಗಳಿಗೆ ಹೋಲಿಸಿದರೆ ಬಾರ್ ಮತ್ತು ವೈನ್ಸ್ ಸ್ಟೋರ್‌ಗಳ ಮದ್ಯದ ಪೆಟ್ಟಿಗೆ ಖರೀದಿ ಶೇ.2.34ರಷ್ಟು ಮತ್ತು ಬಿಯರ್ ಖರೀದಿ ಶೇ.15.92ರಷ್ಟು ಕ್ಷೀಣಿಸಿದೆ.
ಇದಕ್ಕೆ ಕಾರಣವೇನು?: ವರ್ಷದಿಂದ ವರ್ಷಕ್ಕೆ ಪಾರ್ಟಿ ಕ್ರೇಜ್ ಹೆಚ್ಚಾಗುತ್ತದೆ. ಮದ್ಯಪ್ರಿಯರ ಸಂಖ್ಯೆಯೂ ಬೆಳೆಯುತ್ತಲೇ ಇದೆ. ವರ್ಷಾಂತ್ಯದಲ್ಲಿ ಮೋಜು-ಮಸ್ತಿಗೇನು ಕಡಿಮೆ ಇಲ್ಲ. ಈ ನಿಟ್ಟಿನಲ್ಲಿ ವರ್ಷದ ಕೊನೆಯ ದಿನಗಳಲ್ಲಿ ಎಣ್ಣೆ ಹೊಳೆಯೇ ಹರಿಯುತ್ತಿದೆ. ಆದರೆ 2024ರ ವರ್ಷಾಂತ್ಯದಲ್ಲಿ 2023ಕ್ಕಿಂತಲೂ ಕಡಿಮೆ ಮದ್ಯ ಖರೀದಿಯಾಗಿದೆ. ಇದಕ್ಕೆ ಕಾರಣವೇನೆಂಬ ಪ್ರಶ್ನೆ ಮೂಡುತ್ತಿದೆ. 2024ರ ಡಿಸೆಂಬರ್‌ನಲ್ಲಿ ೋಷಣೆ ಮಾಡಿದ್ದ ಸರ್ಕಾರಿ ರಜೆ ಮತ್ತು ಚಾಮರಾಜನಗರ ಬಂದ್ ಹಿನ್ನೆಲೆಯಲ್ಲಿ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಮಾರಾಟಕ್ಕಿಲ್ಲ ಅಡೆ-ತಡೆ:
ಮದ್ಯದಂಗಡಿಗಳ ಮದ್ಯ ಖರೀದಿ ಕಡಿಮೆಯಾಗಿದ್ದರೂ ಮಾರಾಟ ಕಡಿಮೆಯಾಗಿಲ್ಲ. ಮದ್ಯದಂಗಡಿಗಳು ತಮ್ಮಲ್ಲಿರುವ ಸರಕನ್ನು ಅಧಿಕ ಪ್ರಮಾಣದಲ್ಲೇ ಗ್ರಾಹಕರಿಗೆ ಮಾರಾಟ ಮಾಡಲಾಗಿವೆ. ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ನೀಡಿರುವ ಮಾಹಿತಿ ಪ್ರಕಾರ, 2024ರ ಡಿ.28ರಲ್ಲಿ 4,34,20052 ರೂ. ಮೌಲ್ಯದ 10089 ಪೆಟ್ಟಿಗೆಗಳ ಮದ್ಯ, 62,28,663 ರೂ. ಮೌಲ್ಯದ 3539 ಲೀಟರ್ ಬಿಯರ್ ಮಾರಾಟವಾಗಿದೆ. ಡಿ.30ರಲ್ಲಿ 1,59,75,620 ರೂ. ಮೌಲ್ಯದ 3672 ಮದ್ಯದ ಬಾಕ್ಸ್‌ಗಳು, 19,42,144 ರೂ. ಮೌಲ್ಯದ 1044 ಲೀಟರ್ ಬಿಯರ್ ಬಿಕರಿಯಾಗಿದೆ. ಡಿ.31ರಲ್ಲಿ 4,11,74,884 ರೂ. ಮೌಲ್ಯದ 9581 ಮದ್ಯದ ಬಾಕ್ಸ್‌ಗಳು, 53,88,225 ರೂ. ಮೌಲ್ಯದ 2878 ಲೀಟರ್ ಬಿಯರ್ ಸೇಲ್ ಆಗಿದೆ.
ಅಕ್ರಮ ಮದ್ಯ ಕೇಸ್ ದಾಖಲು 2024ರ ವರ್ಷಾಂತ್ಯದ ಮೂರು ದಿನಗಳಲ್ಲಿ(ಡಿ.28,30,31) ಅಕ್ರಮ ಮದ್ಯ ಮಾರಾಟದ ಮೇಲೆ ಕೇಸ್ ದಾಖಲಾಗಿವೆ. ೋರ ಪ್ರಕರಣ-1, ಸನ್ನದುಗಳ ನಿಯಮ ಉಲ್ಲಂಘನೆ-2, ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ-4, ಬಂಧನ-4, 1090 ರೂ. ಮೌಲ್ಯದ 1.080 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಡಿಸೆಂಬರ್‌ನಲ್ಲಿ ಸರ್ಕಾರಿ ರಜೆ, ಬಂದ್‌ನಿಂದಾಗಿ ಮದ್ಯದಂಗಡಿಗಳ ಮದ್ಯ ಖರೀದಿ ಶೇ.5ರಷ್ಟು ಕಡಿಮೆಯಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆಯೇ ಈ ತಿಂಗಳಲ್ಲಿ ಖರೀದಿ ಪ್ರಮಾಣವೂ ಹೆಚ್ಚಾಗಲಿದೆ. ಪಿ.ಚಂದ್ರ, ಉಪಆಯುಕ್ತ, ಅಬಕಾರಿ ಇಲಾಖೆ, ಚಾಮರಾಜನಗರ