ಮದ್ಯದಂಗಡಿಗಳ ಹೆಚ್ಚಳದ ಪ್ರಸ್ತಾವನೆ ವಿರೋಧಿಸಿ ಸತ್ಯಾಗ್ರಹ

CTD 2 STRIKE 01
Published on


ಚಿತ್ರದುರ್ಗ: ರಾಜ್ಯದಲ್ಲಿ ಅಕ್ರಮ ಮದ್ಯಮಾರಾಟ,ಮದ್ಯದಂಗಡಿಗಳ ಹೆಚ್ಚಳ ಪ್ರಸ್ತಾವನೆ ಹಾಗೂ ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ವಿರೋಧ ವ್ಯ ಕ್ತಪಡಿಸಿ ನಗರದಲ್ಲಿ ಸೋಮವಾರ‘ಮದ್ಯ ನಿಷೇಧ ಆಂದೋಲನ-ಕರ್ನಾಟಕ’ಸಂಘಟನೆ ನೇತೃತ್ವದಲ್ಲಿ ಕಾರ‌್ಯಕರ್ತರು ಸತ್ಯಾಗ್ರಹ ನಡೆಸಿದ ರು.
ನಗರದ ಗಾಂಧಿ ಸರ್ಕಲ್ ಬಳಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಹಾಗೂ ಒನಕೆ ಓಬವ್ವ ವೃತ್ತದ ಬಳಿ ಮದ್ಯದಂಗಡಿ ಹೆಚ್ಚ ಳ ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಿ ದರು.
ಯಾವುದೇ ಸರ್ಕಾರ ಮದ್ಯ ಮಾರಾಟದಿಂದ ಬರುವಂಥ ಆದಾಯವನ್ನು ಕಲ್ಯಾಣ ಕಾರ‌್ಯಕ್ರಮಗಳಿಗೆ ಬಳಸುವುದು ಅಪರಾಧ ಎಂ ದು ಗಾಂಧೀಜಿ ಅವರು ಹೇಳಿದ್ದಾರೆ. ಆದರೆ ರಾಜ್ಯಸರ್ಕಾರ 600 ಗ್ರಾಪಂ ವ್ಯಾಪ್ತಿ ಸೇರಿ ರಾಜ್ಯದಲ್ಲಿ ಹೊಸದಾಗಿ ಒಂದು ಸಾವಿರ ಮದ್ಯ ದಂಗಡಿಗಳ ಆರಂಭಕ್ಕೆ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸಂಘಟನೆ 2015ರಿಂದಲೂ ಮದ್ಯಮಾರಾಟ ನಿಷೇಧಕ್ಕೆ ಒತ್ತಾಯಿಸಿ ನಿರಂತರವಾಗಿ ರಾಜ್ಯಾದ್ಯಂತ ಹೋರಾಟ ನಡೆಸಿಕೊಂಡು ಬರುತ್ತಿದೆ. ಹೈಕೋರ್ಟ್ ಆದೇಶದಂತೆ ಅಕ್ರಮ ಮದ್ಯ ಮಾರಾಟದ ವಿರುದ್ಧವೂ ಕ್ರಮ ವಹಿಸಬೇಕು. ಮದ್ಯ ಮಾರಾಟ ಪರವಾನಗಿಗೆ ಸಂಬಂಧಿಸಿದಂತೆ ಗ್ರಾಮಸಭೆಗೆ ಪರಮಾಧಿಕಾರ ನೀಡಬೇಕೆಂದು ಒತ್ತಾಯಿಸಿದರು.
ಸಂಘಟನೆ ಕಾರ‌್ಯಕರ್ತರಾದ ಎಂ.ಆರ್.ಸಂಧ್ಯಾ,ತಾರಾ,ಅನುಸೂಯಮ್ಮ,ಓಬಕ್ಕ,ಭಾಗ್ಯಮ್ಮ,ಆಶಾ,ಕರಿಯಮ್ಮ,ಜಯಮ್ಮ,ದೇವಿ ರಮ್ಮ,ಎ.ಬಿ.ತೇಜೇಶ್ವರಿ,ಚಿನ್ನಮ್ಮ,ಮಂಜಮ್ಮ,ಬೋರಕ್ಕ,ಮಹೇಶ್,ಸಿರಿಯಣ್ಣ,ಚಿದಾನಂದ,ಅಲುಮೇಶ್,ಕರಿಯಣ್ಣ,ಮಲ್ಲೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net