ಮದ್ಯದ ಅಮಲಿನಲ್ಲಿ ವ್ಯಕ್ತಿ ಕೊಲೆ

Crime Logo
Published on

ಚಿತ್ರದುರ್ಗ: ಮದ್ಯದ ಅಮಲು, ಜೂಜಾಟದ ವೇಳೆ ಜಗಳವಾಗಿ ಯುವಕನ ತಲೆಯನ್ನು ಕಲ್ಲಿನಿಂದ ಜಜ್ಜಿ, ಬರ್ಬರವಾಗಿ ನಾಲ್ವರು ಹತ್ಯೆಗೈದಿರುವ ಘಟನೆ ಶನಿವಾರ ರಾತ್ರಿ ಹೊರವಲಯದ ಕವಾಡಿಗರಹಟ್ಟಿಯಲ್ಲಿ ನಡೆದಿದೆ. ಹಮಾಲಿ ವೃತ್ತಿಯಲ್ಲಿದ್ದ ಇಲ್ಲಿನ ಎಸ್ಸಿ ಕಾಲನಿಯ ಸತೀಶ್ (36) ಕೊಲೆಯಾದ ವ್ಯಕ್ತಿ. ಪಾಲಕರು ಕೃಷ್ಣ ಸೇರಿ ಇನ್ನಿತರರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳ ಪರಿಶೀಲಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದು, ಒಬ್ಬ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net