

ಯಾದಗಿರಿ: ಮಾದಕ ವಸ್ತು ಹಾಗೂ ಮದ್ಯಪಾನ ಸೇವನೆ ದೇಹಕ್ಕೆ ಹಾನಿಕಾರವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.
ನಗರದ ಲುಂಬಿನಿ ಉದ್ಯಾನವನದಲ್ಲಿ ಜಿ¯್ಲÁ ಪೋಲಿಸ್ ಗುರುವಾರ ಹಮ್ಮಿಕೊಂಡ ವ್ಯಸನ ಮುಕ್ತ ಸಮಾಜ -ನಶೆ ಮುಕ್ತ ಯಾದಗಿರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯಪಾನ ಸೇವನೆಯಿಂದ ವೈಯಕ್ತಿಕವಾಗಿ ಆರೋಗ್ಯಕ್ಕೆ ಹಾನಿಯಾಗುವ ಜತೆಗೆ ದೇಶದ ಹಿತದೃಷ್ಟಿಯಿಂದಲೂ ಇದು ಹಾನಿಕಾರಕವಾಗಿದೆ ಎಂದು ಹೇಳಿದರು.
ಉತ್ತಮ ಆರೋಗ್ಯಕ್ಕೆ ಉತ್ತಮ ಹವ್ಯಾಸ ಬಹುಮುಖ್ಯ. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯು ತನ್ನ ಸರ್ವಸ್ವವನ್ನೂ ಕಳೆದುಕೊಳ್ಳುವ ಜತೆಗೆ ಇದು ದೇಶಕ್ಕೂ ಹಾನಿಕಾರಕವಾಗಿದೆ. ಜಿ¯್ಲÁಡಳಿತದಿಂದ ಪ್ರತಿ ಮಾಹೆ ಸಮನ್ವಯ ಸಮಿತಿ ಸಭೆಗಳ ಮೂಲಕ ತಂಬಾಕು, ಮದ್ಯಪಾನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಬಿರಾದಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ್, ಡಾ.ವೀರೇಶ್ ಜಾಕಾ ಮಾತನಾಡಿದರು. ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ ಪ್ರತಿe್ಞÁ ವಿಧಿ ಬೋಧಿಸಿದರು.
ಕುಮಾರಿ ಶಿಲ್ಪಾ ಯೋಗ ಪ್ರದರ್ಶಿಸಿದರು. ಗಿರಿನಗರ ಸಾಂಸ್ಕೃತಿಕ ಕಲಾ ತಂಡದಿAದ ಕಿರು ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ತಂಡದಿAದ ರೂಪಕ ಪ್ರದರ್ಶನದಿಂದ ಅರಿವು ಮೂಡಿಸಲಾಯಿತು. ಡಿವೈಎಸ್‌ಪಿ ಭರತಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಿವೈಎಸ್ಪಿ ಜಾವೇದ್ ಇನಾಂದಾರ ವಂದಿಸಿದರು. ಆರಂಭದಲ್ಲಿ ಬೆಳಗ್ಗೆ ಸುಭಾಷ್ ವೃತ್ತದಿಂದ ಲುಂಬಿನಿ ಉದ್ಯಾನದವರೆಗಿನ ಜಾಗೃತಿ ಜಾಥಾಕ್ಕೆ ಜಿ¯್ಲÁಧಿಕಾರಿ ಡಾ.ಸುಶೀಲಾ ಚಾಲನೆ ನೀಡಿದರು. ಗಣಿ ಮತ್ತು ಭೂ ವಿe್ಞÁನ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಡಿಡಿಪಿಐ ಸಿ.ಎಸ್.ಮುದೋಳ್, ಸಿಪಿಐಗಳಾದ ಸುನೀಲಕುಮಾರ, ಶ್ರೀದೇವಿ ಬಿರಾದಾರ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ್ ಇತರರಿದ್ದರು.