ಮದ್ಯ, ಬಿಯರ್, ಸೇಂದಿ ನಾಶ

IMG_20221213_194212
Published on

ಶ್ರೀರಂಗಪಟ್ಟಣ: ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಹಾಗೂ ಅವಧಿ ಮುಗಿದಿದ್ದ ಮದ್ಯ, ಬಿಯರ್ ಹಾಗೂ ಸೇಂದಿಯನ್ನು ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿಯಾಗಿ ನಾಶಪಡಿಸಿದರು.

ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದ ಮೆ.ವಿಲ್ಸನ್ ಡಿಸ್ಟಿಲರಿ ಘಟಕದಲ್ಲಿ ಮಂಗಳವಾರ ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶದಂತೆ ಪಾಂಡವಪುರ ವಲಯದ ಉಪ ಅಧೀಕ್ಷಕ ವೈ.ಡಿ.ಗುರುರಾಜ್ ನೇತೃತ್ವದಲ್ಲಿ 1286.525 ಲೀ.ಮದ್ಯ, 79.73 ಲೀ. ಬಿಯರ್, 272 ಲೀ. ಸೇಂದಿ ಹಾಗೂ ಕೆಆರ್‌ಎಸ್‌ನ ಹೊಟೇಲ್ ರಿವರ್‌ವ್ಯೆ ಕಾವೇರಿಯ ಸಿ.ಎಲ್.15 ಸನ್ನದುವಿನಲ್ಲಿ ಅವಧಿ ಮುಗಿದಿದ್ದ 650 ಮಿ. 204 ಬಿಯರ್ ಬಾಟಲಿಗಳನ್ನು ನಾಶಪಡಿಸಲಾಯಿತು.

ಈ ಎಲ್ಲ ವಿಧದ ಮದ್ಯವನ್ನು 2018, 19, 20, 21ನೇ ಸಾಲಿನಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆಗಳ ವಿವಿಧ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಶ್ರೀರಂಗಪಟ್ಟಣ ವಲಯ ಅಬಕಾರಿ ನೀರಿಕ್ಷಕಿ ಎಚ್.ಡಿ.ರಮ್ಯಾ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಚೆನ್ನಯ್ಯ, ಕೆ.ಎಸ್.ಬಿ.ಸಿ.ಎಲ್ ಡಿಪೋ ವ್ಯವಸ್ಥಾಪಕ ವೆಂಕಟರಮಣೇಗೌಡ, ರಾಜಸ್ವ ನೀರಿಕ್ಷಕ ಗೋವರ್ಧನ್, ಗ್ರಾಮಲೆಕ್ಕಿಗ ಉಮೇಶ್, ಗ್ರಾಮ ಸಹಾಯಕರಾದ ಮಲ್ಲೇಶ್, ವೆಂಕಟಪ್ಪ, ಅಬಕಾರಿ ಇಲಾಖೆ ಸಿಬ್ಬಂದಿ ರಾಮು, ನಾಗೇಂದ್ರ, ಯೋಗೇಶ್, ದಿಲೀಪ್ ,ನಾಗರಾಜು, ಸಂದೀಪ್ ಇತರರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net