ಮದ್ಯ ಜಪ್ತಿ, ಇಬ್ಬರ ಬಂಧನ

h11-raid
Published on

ಹುಬ್ಬಳ್ಳಿ: ರಂಗಪಂಚಮಿ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ನೇಕಾರ ನಗರದಲ್ಲಿ ಮದ್ಯ ಹಾಗೂ ನಗದು ಜಪ್ತಿ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ನೇಕಾರ ನಗರದ ಪ್ರಕಾಶ ಬಸವಾ, ಕಾಶಿನಾಥ ಪವಾರ ಬಂಧಿತರು. ಬಂಧಿತರಿಂದ 11,200 ರೂ. ನಗದು ಹಾಗೂ 36,184 ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಸಿಸಿಬಿ ಎಸಿಪಿ ನಾರಾಯಣ ಬರಮನಿ, ಪಿಐಗಳಾದ ಶರಣಗೌಡ ನ್ಯಾಮಣ್ಣವರ, ರಮೇಶ ಕಾಂಬಳೆ ನೇತೃತ್ವದ ತಂಡ ದಾಳಿ ಮಾಡಿತ್ತು. ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net