ಮದ್ಯ ಕುಡಿಸಿ ಸ್ನೇಹಿತನ ಕೊಂದ ಭೂಪ!

Bhupa killed his friend by drinking alcohol!
Bhupa killed his friend by drinking alcohol!
Published on

ಜಮಖಂಡಿ: ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಹಣಕಾಸಿನ ವಿಚಾರಕ್ಕೆ ಸ್ನೇಹಿತರಿಬ್ಬರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಗ್ರಾಮದ ಬಸಪ್ಪ ತಳವಾರ (32) ಕೊಲೆಯಾದ ದುರ್ದೈವಿ. ತೇರದಾಳ ತಾಲೂಕಿನ ಹನಗಂಡಿ ಗ್ರಾಮದ ಮಹಾಲಿಂಗ ಬಿದರಿ ಹತ್ಯೆಗೈದ ಆರೋಪಿ.

ಇಬ್ಬರು ಸ್ನೇಹಿತರ ಮಧ್ಯೆ ಹಣದ ವ್ಯವಹಾರ ನಡೆದಿತ್ತು. ಹಣ ಮರಳಿ ನೀಡದೆ ಇರುವುದರಿಂದ ಆಗಾಗ ಜಗಳವೂ ನಡೆಯುತ್ತಿತ್ತು. ಹಣ ನೀಡುವುದಾಗಿ ಬಸಪ್ಪನನ್ನು ಕುಂಬಾರಹಳ್ಳದ ಬಾಡಿಗೆ ಮನೆಗೆ ಕರೆಯಿಸಿಕೊಂಡ ಆರೋಪಿ ಮಹಾಲಿಂಗ ಮದ್ಯ ಕುಡಿಸಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟಿದ್ದಾನೆ ಎನ್ನಲಾಗಿದೆ.

ಆರೋಪಿ ತಾನಾಗಿಯೇ ಗ್ರಾಮಿಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಘಟನಾ ಸ್ಥಳವನ್ನು ಎಸ್ಪಿ ಅಮರನಾಥರೆಡ್ಡಿ, ಡಿವೈಎಸ್‌ಪಿ ಶಾಂತವೀರ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net