ಮದ್ಯ ಕುಡಿದ ಮತ್ತಿನಲ್ಲಿ ಪತ್ನಿ ಹತ್ಯೆಗೈದ ಪತಿ

death
ಸಾಂದರ್ಭಿಕ ಚಿತ್ರ
Published on

ಮೂಡಲಗಿ: ಮದ್ಯ ಕುಡಿದ ಮತ್ತಿನಲ್ಲಿ ಪತಿಯೋರ್ವ ತನ್ನ ಪತ್ನಿಯನ್ನು ಕೊಲೆಗೈದ ಟನೆ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಯಲ್ಲವ್ವ ಹಾರೂಗೇರಿ (58) ಕೊಲೆಯಾದ ಮಹಿಳೆ. ಆರೋಪಿ ಪಾಂಡಪ್ಪ ಹಾರೂಗೇರಿ (62) ಪರಾರಿಯಾಗಿದ್ದಾನೆ.

ಮೂಲತ@ ವಿಜಯಪುರ ಜಿಲ್ಲೆಯ ದನ್ಯಾಳ ಗ್ರಾಮದವರಾದ ಪತಿ&ಪತ್ನಿ ದುಡಿಮೆ ಮಾಡಲು ಎರಡು ವರ್ಷಗಳ ಹಿಂದೆ ಗುರ್ಲಾಪುರ ಗ್ರಾಮದ ಲಕ್ಷ$್ಮಣ ಹಳ್ಳೂರ ಎಂಬುವವರ ತೋಟದಲ್ಲಿ ವಾಸವಾಗಿದ್ದರು. ದಂಪತಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.

ಮಕ್ಕಳು ಭೂ ಮಾಲೀಕನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಪಾಂಡಪ್ಪ, ಮಲಗಿದ್ದ ಪತ್ನಿಯನ್ನು ಕೊಡಲಿ ಹಾಗೂ ಕೂಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮೂಡಲಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net