

ಮದ್ದೂರು: ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ಮಾಡಿರುವುದು ಅವೈಜ್ಞಾನಿಕ ಎಂದು ಆರೋಪಿಸಿ ವಿವಿಧ ಪ್ರಗತಿ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಮದ್ದೂರು ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಹಾಲಿನ ಮಳಿಗೆಗಳು ಹೊರತು ಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಪಟ್ಟಣದ ವ್ಯಾಪ್ತಿಯಲ್ಲಿರುವ ಅಂಗಡಿ ಮುಂಗಟ್ಟುಗಳು, ಶಾಲಾ, ಕಾಲೇಜುಗಳು, ಚಿತ್ರಮಂದಿಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲ ರೀತಿಯ ವ್ಯವಹಾರ ಬಂದ್ ಆಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಣಣದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಮಿಳುನಾಡು ಸಿಎಂ ಪ್ರತಿಕೃತಿ ದಹನ: ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತಮಿಳುನಾಡಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ತಮಿಳುನಾಡು ಸರ್ಕಾರದ ಪ್ರತಿಕೃತಿ ದಹಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.
ಬೃಹತ್ ಮೆರವಣಿಗೆ: ಪಟ್ಟಣದ ಪ್ರವಾಸಿಮಂದಿರದಿಂದ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ನೂರಾರು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ತಾಲೂಕು ಕಚೇರಿಗೆ ಆಗಮಿಸಿ, ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದವು.
ಪ್ರತಿಭಟನೆಯಲ್ಲಿ ವಿವಿಧ ಪಗತಿಪರ ಸಂಘಟನೆಗಳ ಮುಖಂಡರಾದ ವಿ.ಸಿ.ಉಮಾಶಂಕರ್, ಸೊ.ಶಿ.ಪ್ರಕಾಶ್, ನ.ಲಿ.ಕೃಷ್ಣ, ಎಸ್.ಅಶೋಕ್, ಸೌಭಾಗ್ಯಮ್ಮ ಮಹಾದೇವು, ಪ್ರಭುಲಿಂಗ, ಕೆ.ಜಿ.ಉಮೇಶ್, ತಿಪ್ಪೂರು ರಾಜೇಶ್, ಯರಗನಹಳ್ಳಿ ಮಹಾಲಿಂಗ, ಎಸ್.ದಯಾನಂದ್, ಶಿವಲಿಂಗಯ್ಯ, ರವಿ, ದೇಶಹಳ್ಳಿ ಪಿ.ಶಿವಪ್ಪ, ವೀರಭದ್ರಸ್ವಾಮಿ, ಜಯಂತಿಲಾಲ್‌ಪಟೇಲ್, ತಿಪ್ಪೂರು ಮನು, ಮಮಂತಶಂಕರೇಗೌಡ, ಬಿ.ವಿ.ಶಂಕರೇಗೌಡ, ಕೀಳಘಟ್ಟ ನಂಜುಂಡಪ್ಪ, ಉಮೇಶ್, ಗೊರವನಹಳ್ಳಿ ರಾಘವ, ಪ್ರಸನ್ನ, ನಿಂಗೇಗೌಡ, ಸೋಂಪುರ ಉಮೇಶ್, ಪಟೇಲ್ ಹರೀಶ್, ಜಗದೀಶ್, ಜಗ್ಗಿಶೀನಪ್ಪ, ಮರಳಿಗ ಶಿವರಾಜು, ಸೋಮನಹಳ್ಳಿ ಅಂದಾನಿ ಸೇರಿದಂತೆ ಇತರರಿದ್ದರು.