ಮದ್ದೂರು ಪುರಸಭಾ ಅಧ್ಯಕ್ಷ-ಅಧ್ಯಕ್ಷೆ ರಾಜೀನಾಮೆ

16M.D.R.5
ಮದ್ದೂರು ಪುರಸಭಾ ಅಧ್ಯಕ್ಷ ಸುರೇಶ್‌ಕುಮಾರ್ ಹಾಗೂ ಉಪಾಧ್ಯಕ್ಷೆ ಸುಮಿತ್ರಾ ರಮೇಶ್ ಅವರು ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ತೈಲೂರು ಪ್ರಸನ್ನಕುಮಾರ್, ಅಶೋಕ್ ಇದ್ದರು.
Published on

ಮದ್ದೂರು: ಪುರಸಭಾ ಅಧ್ಯಕ್ಷ ಸುರೇಶ್‌ಕುಮಾರ್ ಹಾಗೂ ಉಪಾಧ್ಯಕ್ಷೆ ಸುಮಿತ್ರಾ ರಮೇಶ್ ಅವರು ತಮ್ಮ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ಪುರಸಭೆ ಕಚೇರಿಯ ಎಸ್.ಎಂ. ಕೃಷ್ಣ ಸಭಾಂಗಣಕ್ಕೆ ತೆರಳಿ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ರಾಜೀನಾಮೆ ಪತ್ರ ಸಲ್ಲಿಸಿದರು.

ಅಧ್ಯಕ್ಷ ಸುರೇಶ್‌ಕುಮಾರ್ ಮಾತನಾಡಿ, ಪುರಸಭೆ ಅಧ್ಯಕ್ಷನಾಗಿ 30 ತಿಂಗಳು ಕರ್ತವ್ಯ ನಿರ್ವಹಿಸುವ ಮೂಲಕ ಹಲವಾರು ಅಭಿವೃದ್ಧಿ ಕಾರ್ಯ ಮಾಡಿರುವುದು ನನ್ನಗೆ ತೃಪ್ತಿ ತಂದಿದೆ. ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಹಾಗೂ ಪುರಸಭಾ ಹಿರಿಯ ಸದಸ್ಯರ ಸಲಹೆ ಮತ್ತು ಮಾರ್ಗದರ್ಶ ಪಡೆಯುವ ಜತೆಗೆ ಪಟ್ಟಣದ ನಾಗರಿಕರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.

ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಇನ್ನುಳಿದ 30 ತಿಂಗಳ ಅವಧಿಗೆ ಮೀಸಲಾತಿ ಪ್ರಕಟಗೊಂಡು ಚುನಾವಣೆ ನಡೆಯುವತನಕ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಸುತ್ತೇನೆ. ಸದಸ್ಯರು ಹಾಗೂ ಅಧಿಕಾರಿಗಳು ನನಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ತೈಲೂರು ಪ್ರಸನ್ನಕುಮಾರ್, ಮುಖ್ಯಾಧಿಕಾರಿ ಅಶೋಕ್, ಸದಸ್ಯರಾದ ಎಂ.ಐ.ಪ್ರವೀಣ್‌ಕುಮಾರ್, ಪ್ರಿಯಾಂಕಾ ಅಪ್ಪುಗೌಡ, ಸರ್ವಮಂಗಳ, ವನಿತಾ, ಶೋಭಾರಾಣಿ, ಕೋಕಿಲ ಅರುಣ್‌ಕುಮಾರ್, ಆದಿಲ್, ನಂದೀಶ್, ಬಸವರಾಜು ಹಾಗೂ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net