ಮದ್ದೂರಿನಾದ್ಯಂತ ಮಳೆ

IMG20230609171032
ಮದ್ದೂರಿನಲ್ಲಿ ಉತ್ತಮ ಮಳೆ ಬರುತ್ತಿರುವುದು.
Published on

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ನಿರಂತರವಾಗಿ ಎರಡು ಗಂಟೆಗಳ ಕಾಲ ಮಳೆ ಬಂದು ಇಳೆಯನ್ನು ತಂಪಾಗಿಸಿತು.ಮದ್ದೂರು, ಬೆಸಗರಹಳ್ಳಿ, ಗೆಜ್ಜಲಗೆರೆ, ಸೋಮನಹಳ್ಳಿ, ಹುಲಿಗೆರೆಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರಿದ್ದಾನೆ. ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳನ್ನು ಆರಂಭಿಸಿರುವ ಸಂದರ್ಭದಲ್ಲಿ ಮಳೆ ಬಂದಿರುವುದು ರೈತಾಪಿ ವರ್ಗಕ್ಕೆ ಸಂತಸ ತಂದಿದೆ. ದಿಢೀರ್ ಮಳೆಯಿಂದ ಶಾಲಾ ಮಕ್ಕಳು ಮನೆಗೆ ಹೋಗಲು ಹಾಗೂ ಸಾರ್ವಜನಿಕರು ಪರದಾಡಿದರು. ಮಳೆಯಿಂದ ಯಾವುದೇ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net