ಮದ್ದೂರಿಗೆ ಆಗಮಿಸಿದ ಸಿಎಂಗೆ ಸ್ವಾಗತ ಕೋರಿದ ಮುಖಂಡರು

ಸಿಎಂ ಗೆ ಸ್ವಾಗತ
ಬೆಂಗಳೂರಿನಿಂದ ಮೈಸೂರು-ಬೆಂಗಳೂರು ಎಕ್ಸ್‌ಪ್ರೇಸ್ ವೇ ವೀಕ್ಷಣೆಗೆ ತಾಲೂಕಿನ ಗಡಿಭಾಗಕ್ಕೆ ಶನಿವಾರ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಇದೇ ವೇಳೆ ಸಿದ್ದರಾಮಯ್ಯ ಮದ್ದೂರು ವಡೆ ಸವಿದರು. ಕದಲೂರು ರಾಮಕೃಷ್ಣ, ಜೋಗಿಗೌಡ ಇತರರಿದ್ದರು.
Published on

ಮದ್ದೂರು: ಬೆಂಗಳೂರಿನಿಂದ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ವೀಕ್ಷಣೆಗೆ ತಾಲೂಕಿನ ಗಡಿಭಾಗಕ್ಕೆ ಶನಿವಾರ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲಾಧಿಕಾರಿ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪ ವಿಭಾಗದಿಕಾರಿ ಶಿವಮೂರ್ತಿ, ಎಸ್ಪಿ ಯತೀಶ್, ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ಮುಖಂಡರಾದ ಅರುಣ್‌ಕುಮಾರ್, ಅಭಿಷೇಕ್, ರಾಮಕೃಷ್ಣ, ಸುಧಾಕರ್, ತಿಮ್ಮೇಗೌಡ ಸೇರಿದಂತೆ ಇತರರು ಹಾಜರಿದ್ದರು.
ಮದ್ದೂರು ವಡೆ, ಕಾಫಿ ಸವಿದ ಸಿಎಂ: ತಾಲೂಕಿನ ನಿಡಘಟ್ಟ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಕಾರಿನಲ್ಲಿ ಕುಳಿತು ಮದ್ದೂರು ವಡೆ ಹಾಗೂ ಕಾಫಿ ಕುಡಿದ ನಂತರ ಮಂಡ್ಯದತ್ತ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net