

ಮದುವೆಯಾಗುತ್ತಿಲ್ಲವೆಂದು ಆತ್ಮಹತ್ಯೆ
ಬೆಳಗಾವಿ/ನಿಪ್ಪಾಣಿ: ಮದುವೇಯಾಗುತ್ತಿಲ್ಲ ಎಂದು ಮನನೊಂದ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿಪ್ಪಾಣಿ ತಾಲೂಕಿನ ಲಖನಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಲಖನಾಪುರ ಗ್ರಾಮದ ಸಂದೀಪ ಮಾರುತಿ ಭೋಸಲೆ (೨೮) ಆತ್ಮಹತ್ಯೆ ಮಾಡಿಕೊಂಡ ಯುವಕ.ಮದುವೇಯಾಗುತ್ತಿಲ್ಲ ಎಂದು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.