ವಿಜಯವಾಣಿ ಸುದ್ದಿಜಾಲ ಬೆಳಗಾವಿ: ಮದುವೆಗೆ ಕಂಕಣಬಲ ಕೂಡಿ ಬರುತ್ತಿಲ್ಲ ಎಂದು ಯುವಕನೊರ್ವ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೆ.ಕೆ ಕೊಪ್ಪ ಗ್ರಾಮದಲ್ಲಿ ಭಾನುವಾರ ನಡೆದಿದೆ..ಗ್ರಾಮದ ಬಸವರಾಜ ಡೊಂಗರಗಾವಿ(೨೮) ಆತ್ಮಹತ್ಯೆ ಮಾಡಿಕೊಂಡ ಯುವಕ. ಮದುವೆಗೆ ನೋಡುತ್ತಿಲ್ಲ ಎಲ್ಲಾ ಸಂಬಂದಗಳು ರದ್ದಾಗುತ್ತಿದ್ಸವು ಎಂದು ಮನನೊಂದು ತಮ್ಮ ಹೊಲದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೀರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.