

ಕಲಬುರಗಿ: ಮದುವೆಯಾದ ಎರಡೇ ತಿಂಗಳು ಪರ‍್ಣಗೊಳ್ಳುವ ಮುನ್ನವೇ ಪತ್ನಿ, ಪತಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಟನೆ ನಡೆದಿದೆ. ಜೇರ‍್ಗಿಯ ಮಂದ್ರವಾಡ ಮೂಲಕ ಹೀರಾಪುರ ನಿವಾಸಿ ಸಂತೋಷ ಮ್ಯಾಗೇರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೇ.೫ರಂದು ಸಂತೋಷ ಮ್ಯಾಗೇರಿ ಮದುವೆ ನದಿಸಿನ್ನೂರಿನ ಶೋಭಾ ಅವರೊಂದಿಗೆ ಆಗಿತ್ತು. ಶೋಭಾ ಮೇ .೨೪ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ಸಾವಿನಿಂದ ನೊಂದಿದ್ದ ಸಂತೋಷ ಮನೆಯಲ್ಲಿನ ಸೀಲಿಂಗ್ ್ಯಾನ್ಗೆ ನೇಣು ಹಾಕಿಕೊಂಡು, ಜೂ.೨೧ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿನಲ್ಲಿ ಯಾರ ಮೇಲೂ ಅನುಮಾನವಿಲ್ಲ ಎಂದು ಮೃತನ ತಾಯಿ ನೀಡಿದ ದೂರಿನಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.