

ಬೀದರ್: ನಗರದ ಹೊರವಲಯದ ಕೊಳಾರ್ ಕೈಗಾರಿಕೆ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ದಿನಗಳ ಹಿಂದಷ್ಟೇ ಮದುವೆಯಾದ ಶಿಕ್ಷಕ ಮೃತಪಟ್ಟಿರುವ ಘಟನೆ ನಡೆದಿದೆ.
ಕಮಲನಗರ ತಾಲೂಕಿನ ಬಳತ್ (ಬಿ) ನಿವಾಸಿ ಅರುಣ ಕಾಶಿನಾಥ ಪಡಸಾಲೆ (33) ಮೃತ ಶಿಕ್ಷಕ. ಜೂ.29ರಂದು ಮದುವೆಯಾಗಿದ್ದ ಅರುಣ, ತನ್ನ ಪತ್ನಿ ಗ್ರಾಮವಾದ ಹುಮನಾಬಾದ್ ತಾಲೂಕಿನ ಮುಗನೂರ್ನಿಂದ ನೌಬಾದ್ ಗೆ ಬೈಕ್ ಮೇಲೆ ಬರುವಾಗ ಸಾರಿಗೆ ಬಸ್ ಡಿಕ್ಕಿ ಆಗಿದೆ. ತೀವ್ರ ರಕ್ತಸ್ರಾವ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಅರುಣ ಮೃತಪಟ್ಟಿದ್ದಾನೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಅರುಣ, ನೌಬಾದ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಘಟನೆಯಿಂದ ಎರಡು ಕುಟುಂಬದಲ್ಲಿ ಆಘಾತವನ್ನುಂಟು ಮಾಡಿದೆ. ನೂತನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.