

ಚಿತ್ರದುರ್ಗ: ಮದುವೆಗೆ ಕೋಟ್ಯಂತರ ರೂ.ವೆಚ್ಚ ಮಾಡುವುದು ಕೂಡ ಒಂದು ಅಪರಾಧವೇ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮುರುಘಾಮಠದಲ್ಲಿ ಗುರುವಾರ ಏರ್ಪಡಿಸಿದ್ದ 34ನೇ ವರ್ಷದ 12ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಸಾನ್ನಿಧ್ಯವಹಿಸಿ ಮಾ ತನಾಡಿ,ಅದ್ದೂರಿ ಮದುವೆಗೆ ಕೋಟ್ಯಂತರ ರೂ.ದುಂದು ವೆಚ್ಚ ಸಲ್ಲದು. ಬಡವ,ಬಲ್ಲಿದರೆನ್ನದೇ ಸರಳ ವಿವಾಹಕ್ಕೆ ಎಲ್ಲರೂ ಆದ್ಯತೆ ಕೊಡ ಬೇಕಿದೆ. ಮುರುಘಾಮಠದಲ್ಲಿ ಮದುವೆಯಾಗುವುದು ಎಂದರೆ ಅದು ಸಾಕ್ಷಾತ್ ಬಸವಣ್ಣನವರ ಸನ್ನಿಧಿಯಲ್ಲಿ ವಿವಾಹವಾದಂತೆ. ಶ್ರೀ ಮಠದಲ್ಲಿ ನಿತ್ಯ 3 ಸಾವಿರಕ್ಕೂ ಹೆಚ್ಚು ಜನರು ಪ್ರಸಾದ ಸ್ವೀಕರಿಸುತ್ತಾರೆ. ಶ್ರೀಮಠದಿಂದ ಶೈಕ್ಷಣಿಕ ಕ್ರಾಂತಿಯೂ ಆಗಿದೆ ಎಂದರು.
ಶಿರಸಿಂಗಿ ಮಠದ ಶ್ರೀ ಬಸವಮಹಾಂತ ಸ್ವಾಮೀಜಿ ಮಾತನಾಡಿ,ಜೀವನದಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ದಂಪತಿ ಸಮನಾಗಿ ಸ್ವೀ ಕರಿಸಬೇಕು. ತವರುಮನೆ ಬಿಟ್ಟು ಬಂದ ಹೆಣ್ಣು ಗಂಡನನ್ನು ದೇವರೆಂದು ನಂಬಿ ಬಂದಿರುತ್ತಾಳೆ. ಇದನ್ನು ಅರಿತು ಪತಿ ಆಕೆಯನ್ನು ಪ್ರೀತಿಯಿಂದ ಕಾಣಬೇಕೆಂದರು.
ದಾವಣಗೆರೆ ವಿರಕ್ತ ಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ,ಹೊಂದಾಣಿಕೆಯೇ ಜೀವನ. ಹೊಂದಾಣಿಕೆ ಇಲ್ಲದಿದ್ದರೆ ಬ ದು ಕು ಹಸನಾಗದು. ಮನಸ್ತಾಪಗಳು ಶುರು ವಾದರೆ ಸಂಸಾರ ಬೀದಿಗೆ ಬರುತ್ತದೆ. ಆದ್ದರಿಂದ ಮನಸ್ತಾಪಗಳಿಗೆ ಅವಕಾಶ ಮಾಡಿ ಕೊಡದೇ ಸುಖದಿಂದ ಸಂಸಾರ ನಡೆಸುವಂತೆ ನವ ದಂಪತಿಗಳಿಗೆ ಕಿವಿಮಾತು ಹೇಳಿದರು.
ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ ಮಾತನಾಡಿ, ಸರಳವಾಗಿ ವಿವಾಹವಾದವರು ಸುಖದಿಂದ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು. ಧಾರವಾಡ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಶೃತಿ ಭೂಸನೂರಮಠ ಮಾತನಾಡಿದರು. ಕಾರ‌್ಯದರ್ಶಿ ಎಸ್.ರೂಪಾ,
ತೇರದಾಳ ಹಾಗೂ ಸೋಮವಾರ ಪೇಟೆ ಶ್ರೀಗಳು,ಗ್ರಾಪಂ ಸದಸ್ಯ ಮಲ್ಲಿಕಾರ್ಜುನಪ್ಪ,ಫೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ವಿವಾಹ ಮಹೋತ್ಸವದಲ್ಲಿ 11 ಜೋಡಿ ಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಗುರುಮಠಕಲ್ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ವಂದಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.
(ಸಿಟಿಡಿ 5 ಮುರುಘಾ ಮದುವೆ)
ಚಿತ್ರದುರ್ಗ ಮುರುಘಾಮಠದಲ್ಲಿ ಗುರುವಾರ ಏರ್ಪಡಿಸಿದ್ದ 34ನೇ ವರ್ಷದ 12ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ.ಶ್ರೀಬಸವಕುಮಾರ ಸ್ವಾಮೀಜಿ,ಡಾ.ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವನಾಗೀದೇವ ಸ್ವಾಮೀಜಿ,ಶ್ರೀ ಬಸವಮಹಾಂತ ಸ್ವಾಮೀಜಿ,
ಶೃತಿ ಭೂಸನೂರುಮಠ, ಎಸ್.ರೂಪಾ,ಮಲ್ಲಿಕಾರ್ಜುನಪ್ಪ ಮತ್ತಿತರರು ಇದ್ದರು.
----