ಮದುವೆ ಮಂಟಪದಲ್ಲೆ ಸ್ಥಬ್ಧವಾದ ಮದುಮಗನ ಹೃದಯ !

811d8275-3acb-4ed8-9f71-4b9c2fab25b4
Published on

ಬಾಗಲಕೋಟೆ: ವೈವಾಹಿಕ ಜೀವನದ ಬಗ್ಗೆ ನೂರಾರು ಕನಸು ಹೊತ್ತು ಹಸೆಮಣೆ ಏರಿದ್ದ ಆ ನವದಂಪತಿ ಬಾಳಲ್ಲಿ ವಿಽ ತನ್ನ ಅಟ್ಟಹಾಸ ಮೆರೆದಿದೆ. ಬಾಳಸಂಗಾತಿಗೆ ತಾಳಿ ಕಟ್ಟಿ ಸಪ್ತಪದಿ ತುಳಿಯುವ ಮುನ್ನವೇ ಮದುಮಗನ್ನು ಬಾರದ ಲೋಕಕ್ಕೆ ಬರಸೆಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.

ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನವಜೋಡಿಯೊಂದು ಹೊಸಬಾಳಿಗೆ ಕಾಲಿರಿಸಿದ ಅರೇ ಗಳಿಗೆಯಲ್ಲೆ ಮದುಮಗ ದಿಢೀರನೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಸಾವಪ್ಪಿದ್ದಾನೆ. ಇದರಿಂದ ಸಂಭ್ರಮದ ಉಯ್ಯಾಲೆಯಲ್ಲಿ ತೇಲುತ್ತಿದ್ದ ಇಡೀ ಕಲ್ಯಾಣ ಮಂಟಪದಲ್ಲಿ ಒಮ್ಮೆಲೆ ಸೂತಕದ ವಾತಾವರಣ ಆವರಿಸಿತು.

ಪ್ರವೀಣ ಕುರಣಿ(೨೫) ಅವರ ಮದುವೆ ಶನಿವಾರ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಅಂದುಕೊAಡು ಸಮಯದಲ್ಲಿ ಶಾಸೊöÃಕ್ತವಾಗಿ ವಧುವಿಗೆ ತಾಳಿಯನ್ನು ಕಟ್ಟಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಗೆ ಬಂದಿದ್ದ ಬಂಧು-ಬಳಗದವರು ನವ ದಂಪತಿಗೆ ಆರತಕ್ಷತೆ ಹಾಕಿ ಆಶೀರ್ವದಿಸುವ ಕಾರ್ಯ ನಡೆದಿರುವಾಗಲೇ ಯಾರೂ ಊಹಿಸದ ರೀತಿಯಲ್ಲಿ ಪ್ರವೀಣ ದಿಢೀರನೇ ಎದೆಹಿಡಿದುಕೊಂಡು ಕುಸಿದು ಬಿದ್ದರು. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ವರನ ಪ್ರಾಣಪಕ್ಷಿ ಹಾರಿಹೋಗಿತ್ತು. ವಿಽ ಸುಂದರ ಕನಸು ಹೊತ್ತು ಹಸೆಮಣೆ ಏರಿದ್ದ ಆ ನವಜೋಡಿಯ ಸುಂದರ ಕನಸಿಗೆ ಕೊಳ್ಳಿ ಇಟ್ಟಿತ್ತು. ಮದುಮಗನ ಜೀವನವನ್ನು ನುಂಗಿ, ಮಧುಮಗಳ ಜೀವನವನ್ನೆ ಬಲಿತೆಗೆದುಕೊಂಡು ಅಟ್ಟಹಾಸ ಮೆರೆಯಿತು. ನವದಂಪತಿಗೆ ಶುಭಹಾರೈಸಲು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ಬಂಧು-ಬಳಗದ ಅಪಾರ ಜನರು ವಿಽಗೆ ಹಿಡಿಶಾಪ ಹಾಕದೇ ಇರಲಿಲ್ಲ.

ಸೈಕ್ಲಿಂಗ್ ಪಟುವಿನ ಪುತ್ರ ಪ್ರವೀಣ :

ಮೂಲತಃ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಕುರಣಿ ಕುಟುಂಬ ಪ್ರವೀಣ ಅವರು, ರಾಜ್ಯ ಸೈಕ್ಲಿಂಗ್ ಕಾರ್ಯದಶಿ, ಮುಧೋಳ ದೈಹಿಕ ಪರಿವೀಕ್ಷಕ ಶ್ರೀಶೈಲ ಕುರಣಿ ಅವರ ಪುತ್ರ ಇದ್ದಾರೆ. ಸದ್ಯ ಜಮಖಂಡಿ ನಗರದಲ್ಲಿ ವಾಸ ಇರುವ ಕುರಣಿ ಕುಟುಂಬದಲ್ಲಿ ಶನಿವಾರ ಪ್ರವೀಣ ಮದುವೆ ಸಂಭ್ರಮ ಇನ್ನಿಲ್ಲದ ಸಡಗರವನ್ನುಂಟು ಮಾಡಿತ್ತು. ಆದರೆ, ಆ ಸಡಗರ ಮತ್ತು ಸಂಭ್ರಮ ಅನುಭವಿಸಲು ಸಹ ವಿಽ ಬಿಡಲಿಲ್ಲ ಎನ್ನುವುದು ದುರಂತ.

ಮನೆಯಲ್ಲಿ ದೈವದ ಅಕ್ಕಿಕಾಳು ಆಗಿತ್ತು:

ಪ್ರವೀಣ ಅವರ ಮದುವೆ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತಾದರೂ ಬೆಳಗ್ಗೆ ಜಮಖಂಡಿಯ ಅವರ ಸ್ವಗೃಹದಲ್ಲಿ ದೈವದ ಅಕ್ಕಿಕಾಳು ಜರುಗಿತ್ತು. ಬಳಿಕ ಕಲ್ಯಾಣ ಮಂಟಪಕ್ಕೆ ಆಗಮಿಸಿದ ಜೋಡಿಗೆ ಅಲ್ಲಿ ಬಂಧು-ಬಳಗದವರು ಆರತಕ್ಷತೆ ಹಾಕಿ ಶುಭಹಾರೈಸಲು ಸಜ್ಜಾಗಿದ್ದರು. ಅಷ್ಟರಲ್ಲೆ ವಿಽಯ ಚಲ್ಲಾಟಕ್ಕೆ ಸಿಕ್ಕು ಪ್ರವೀಣ ಪ್ರಾಣ ಬಿಟ್ಟಿದ್ದಾನೆ.

ಮೊದಲ ದಿನವೇ ಅಳಸಿತು ಸಿಂಧೂರ !

ಯುವಕ ಪ್ರವೀಣನ ಕೈಹಿಡಿದು ಹೊಸ ಬಾಳು ಕಟ್ಟಿಕೊಳ್ಳುವ ಕನಸು ಹೊತ್ತಿದ್ದ ಆ ಯುವತಿಯ ಕನಸನ್ನು ಆ ವಿಽ ಮೊದಲ ದಿನವೇ ಹೊಸಹಾಕಿದೆ. ಕೆಲವೇ ಕ್ಷಣಗಳ ಮೊದಲು ಕೊನೆವರೆಗೂ ನಿನ್ನ ಜೊತೆ ಇರುವೆನೆನ್ನುವ ಅಭಯದೊಂದಿಗೆ ತಾಳಿ ಕಟ್ಟಿದ್ದ ಪತಿಯ ಹೃದಯ ತನ್ನ ಕಣ್ಣೇದುರೇ ಸ್ಥಬ್ಧವಾಗಿದ್ದು ಯುವತಿಗೆ ಆಕಾಶವೇ ಕಳಚಿ ಬಿದ್ದ ಅನುಭವ. ದಿಕ್ಕು ತೋಚದಂತಾಗಿ ಮದುವೆ ಮಂಟಪದಲ್ಲಿ ಕಣ್ಣೀರು ಎಲ್ಲರ ಹೃದಯವನ್ನು ಹಿಂಡಿತು. ಇನ್ನು ಯುವಕ ಮತ್ತು ಯುವತಿ ಕುಟುಂಬದವರು, ಬಂಧು-ಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾರು ಯಾರನ್ನೂ ಸಮಧಾನ ಮಾಡುವುದು? ಹೊಸ ಬದುಕಿಗೆ ಕಿಚ್ಚು ಹೊತ್ತಿಸಿದ ವಿಽಗೆ ಹಿಡಿಶಾಪ ಹಾಕುತ್ತಿದ್ದರು.

ಇನ್ನು ನವದಂಪತಿಗೆ ಆರತಕ್ಷತೆ ಹಾಕಿ ನೂರಾರು ವರ್ಷ ಸುಖದಿಂದ ಬಾಳಿ ಎಂದು ಹಾರೈಸಲು ಬಂದಿದ್ದ ಆಪ್ತರು, ಸ್ನೇಹಿತರು, ಬಂಧುಗಳು ದಿಢೀರನೇ ನಡೆದ ಈ ಘಟನೆದಿಂದ ಆಘಾತಕ್ಕೆ ಒಳಗಾಗಿದ್ದರು. ಹೊಸಬಟ್ಟೆ ತೊಟ್ಟುಕೊಂಡು ಸಂಬ0ಽಕರ ಮದುವೆಗೆ ಬಂದಿದ್ದ ಅನೇಕರು ವಿಽಯಾಟಕ್ಕೆ ಬಲಿಯಾದ ಪ್ರವೀಣನ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತ ದುಃಖದ ಸಂದರ್ಭ ಎದುರಿಸಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net