

ಮದುವೆ ಆಗಲಿಲ್ಲವೆಂದು ಸೋದರರು ಸೂಯಿಸೈಡ್
ಚಿಕ್ಕೋಡಿ(ಬೆಳಗಾವಿ): ಮದುವೆ ಆಗಿಲ್ಲ ಎಂದು ಮನನೊಂದು ಹುಕ್ಕೇರಿ ತಾಲೂಕಿನ
ಕೋಣನಕೇರಿ ಗ್ರಾಮದಲ್ಲಿ ಸಹೋದರರಿಬ್ಬರು ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ ರವೀಂದ್ರ ಗುಂಡೆ (55), ಅಣ್ಣಾಸಾಹೇಬ ರವೀಂದ್ರ ಗುಂಡೆ (50) ಮೃತರು. ವಯಸ್ಸು ಮೀರಿದರೂ ಮದುವೆಯಾಗದ ಹಿನ್ನೆಲೆಯಲ್ಲಿ ಜಿಗುಪ್ಪೆಗೊಂಡು ವಿಷ ಸೇವಿಸಿದ್ದಾರೆ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಗಡಹಿಂಗ್ಲಜ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಇಬ್ಬರೂ ಅಸುನೀಗಿದ್ದಾರೆ. ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.